Featured, ಇತರೆ, ಸ್ಥಳೀಯ

ಅಜ್ಜಾವರ-ಮೇನಾಲ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇ-ವಾರ್ತೆ ವತಿಯಿಂದ ಉಚಿತ ಛತ್ರಿ (ಕೊಡೆ) ವಿತರಣೆ

ಇ-ವಾರ್ತೆ ಡಿಜಿಟಲ್ ವೆಬ್ ಮೀಡಿಯಾ ವತಿಯಿಂದ ಜುಲೈ 26 ರಂದು ಸರಕಾರಿ ಪ್ರಾಥಮಿಕ ಶಾಲೆ ಅಜ್ಜಾವರ-ಮೇನಾಲದಲ್ಲಿ ಉಚಿತ ಛತ್ರಿ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಪ್ರದೀಪ್ ಪೂಜಾರಿ ಪೋಡುಂಬು ವಹಿಸಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದೇವಕಿ ವಿಷ್ಣುನಗರ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕನಕ, ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ರೈ ಮೇನಾಲ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ, ಯುವ ಉದ್ಯಮಿ ಶಬೀರ್ ಆರ್ಕುಟ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸೌಕತ್ ಆಲಿ ಮೆನಾಲ, ರಂಜಿತ್ ರೈ ಮೇನಾಲ ಅಧ್ಯಕ್ಷರು ವಿಷ್ಣು ಯುವಕ ಮಂಡಲ ಮೇನಾಲ, ಅಬ್ದುಲ್ಲಾ ಉಪಾಧ್ಯಕ್ಷರು SDMC ಖಲಂದರ್ ಶಾಫಿ ಮಾರ್ಕೆಟಿಂಗ್, ಇ-ವಾರ್ತೆ ಡಿಜಿಟಲ್ ಮೀಡಿಯಾ ಮುಂತಾದವರು ಉಪಸ್ಥಿತರಿದ್ದರು.

ಕಣ್ಣಿಗೆ ಕಾಣುವ ದೇವರುಗಳಾದ ತಂದೆ, ತಾಯಿ, ಮತ್ತು ಗುರುಗಳ ಆಶಿರ್ವಾದ ನಿತ್ಯವಿರಬೇಕು : ರಾಮಚಂದ್ರ ಪೆಲ್ತಡ್ಕ 

ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ ಮಾತನಾಡಿ ವಿಧ್ಯಾರ್ಥಿಗಳಿಗೆ ನಗೆಗಡಲಲ್ಲಿ ತೇಲಿಸಿದರು, ಕಣ್ಣಿಗೆ ಕಾಣುವ ದೇವರುಗಳಾದ ತಂದೆ, ತಾಯಿ, ಮತ್ತು ಗುರುಗಳ ಆಶಿರ್ವಾದ ನಿತ್ಯವಿರಬೇಕು. ಒಳ್ಳೆಯ ವಿಧ್ಯಾರ್ಥಿಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.

ಹಿಂದುಳಿದ ಮತ್ತು ಬಡ ಮಕ್ಕಳು ಇರುವ ನಮ್ಮ ಶಾಲೆಯನ್ನು ಆಯ್ಕೆ ಮಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಮಕ್ಕಳನ್ನು ನೀಡಲಾಗುತ್ತಿದೆ ಇ-ವಾರ್ತೆಗೆ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರದೀಪ್ ಪೂಜಾರಿ ಕೃತಜ್ಞತೆ ತಿಳಿಸಿ ಇ-ವಾರ್ತೆ ಮುಖ್ಯಸ್ಥ ರಶೀದ್ ಜಟ್ಟಿಪಳ್ಳ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ನೈಜ ಸುದ್ದಿಯನ್ನು ಸಮಾಜಕ್ಕೆ ಮತ್ತು ಸಮುದಾಯಕ್ಕೆ ತಲುಪಿಸುವ ಉದ್ದೇಶ : ರಶೀದ್ ಜಟ್ಟಿಪಳ್ಳ

ಇ-ವಾರ್ತೆ ಮುಖ್ಯಸ್ಥ ರಶೀದ್ ಜಟ್ಟಿಪಳ್ಳ ಮಾತನಾಡಿ ನಮ್ಮ ಸಂಸ್ಥೆಯು ಸ್ವಂತ ಲಾಭಕ್ಕಾಗಿ ಮಾಡುತ್ತಿಲ್ಲ, ಬದಲಾಗಿ ನೈಜ ಸುದ್ದಿಯನ್ನು ಸಮಾಜಕ್ಕೆ ಮತ್ತು ಸಮುದಾಯಕ್ಕೆ ತಲುಪಿಸುವ ಉದ್ದೇಶವನ್ನು ಹೊಂದಿದ್ದೇವೆ, ಇದರಿಂದ ಬರುವ ಒಂದು ಲಾಭಾಂಶವನ್ನು ಸಮುದಾಯದ ಏಳಿಗೆಗೆ ಬಳಸುವುದೇ ನಮ್ಮ ಮೂಲ ಉದ್ದೇಶವಾಗಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸಮಾಜದ ಬೆಳವಣಿಗೆಗೆ ಸಣ್ಣ ಕೊಡುಗೆ ನೀಡುವುದು ನಮ್ಮ ಗುರಿಯಾಗಿದೆ.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಬಣ್ಣ ಬಣ್ಣಗಳ ಛತ್ರಿ ವಿತರಿಸಲಾಯಿತು.

m

 

Related Posts