ಸುಳ್ಯ : ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಗೆ ಅರಂಬೂರು ಬಳಿ ಬೃಹತ್ ಗಾತ್ರದ ಮರ ಬಿದ್ದು ಕೆಲವು ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಸಂಭವಿಸಿದ ತಕ್ಷಣವೇ ಘಟನೆ ಸ್ಥಳಕ್ಕೆ ಧಾವಿಸಿ ಬಂದ ಸ್ಥಳೀಯ ಸಾಮಾಜಿಕ ಸಂಘ ಸಂಸ್ಥೆ ಯಾದ ಅಲ್ ಅಮೀನ್ ಯೂತ್ ಫೆಡರೇಷನ್ ನ ಸದಸ್ಯರು ಸ್ಥಳೀಯ ಜನರ ಸಹಕಾರದಿಂದ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಹೆದ್ದಾರಿಯಲ್ಲಿ ವಾಹನ ದಟ್ಟನೆ ಆಗುವ ಮೊದಲೇ ತೆರವುಗೊಳಿಸಿ ಸಾರ್ವಜನಿಕರ ಪ್ರಶಂಸೆ ಗೆ ಪಾತ್ರರಾಗಿದ್ದಾರೆ,ಸಂಸ್ಥೆಯ ಸದಸ್ಯರ ಚುರುಕುತನದ ಸೇವೆಯನ್ನು ಪೊಲೀಸ್,ಅರಣ್ಯ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು.







m
