ಮಡಿಕೇರಿ : ಕೊಯನಾಡು ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಕಾರ್ಯದರ್ಶಿ, ಇವಾರ್ತೆ ವೈಬ್ ಮೀಡಿಯಾ ವರದಿಗಾರ ಹಾಗೂ ಹಲವಾರು ಜನಪರ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಪ್ರತಿಭೆ ರುನೈಝ್ ಎಸ್ ಎ ರವರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ BSW (Bachelor of Social Work) 2025ರ ಪದವಿ ಪರೀಕ್ಷೆಯಲ್ಲಿ First Class with Distinctionನಲ್ಲಿ ಉತ್ತೀರ್ಣರಾಗಿದ್ದಾರೆ.
ಅವರ ಈ ಸಾಧನೆಯನ್ನು ಕೊಂಡಾಡಿದ ವಿರಾಜಪೇಟೆ ಕ್ಷೇತ್ರದ ಜನಪ್ರಿಯ ಶಾಸಕರೂ, ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ಶ್ರೀ ಎ ಎಸ್ ಪೊನ್ನಣ್ಣ ನವರು ರುನೈಝ್ ಅವರನ್ನು ಸನ್ಮಾನಿಸಿ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉನ್ನತ ಸಾಧನೆಗಾಗಿ ಶುಭ ಹಾರೈಸಿದರು.






m

