Featured, ಅಂಕಣ, ಇತರೆ, ಸ್ಥಳೀಯ

ಟೌನ್ ಓಫ್ ಕೆ ಎಲ್ ಜಿ : ಮೈ ಟೌನ್ ಮೈ ಸ್ಟೋರಿ ರೀಲ್ಸ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಕಲ್ಲುಗುಂಡಿ : ಆಗಸ್ಟ್ 03 : ಟೌನ್ ಓಫ್ ಕೆ ಎಲ್ ಜಿ ವಾಟ್ಸಪ್ ಗ್ರೂಪ್ ಇನ್ಸ್ಟಾಗ್ರಾಮ್ ರೀಲ್ಸ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ರಾಯಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಡ್ಮಿನ್ ಸಾಲಿ ಫೈವ್ ಸ್ಟಾರ್ ವಹಿಸಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಕೆ ಹನೀಫ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಂಪಾಜೆ, ಜಿ ಕೆ ಹಮೀದ್ ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ಯೂಸುಫ್ ಕಲ್ಲುಗುಂಡಿ ವಿಡಿಯೋ ಗ್ರಾಫರ್ ಭಾಗವಹಿಸಿದರು. 

ರೀಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಅಭಿಷೇಕ್ ಕಡೆಪಾಲ, ದ್ವಿತೀಯ ಆಯಿಶತ್ ಅಫ್ರೀನಾ, ತೃತೀಯ ಶಮ್ಮಾಸ್ ಕೆ ಎಸ್, ಗೋಲ್ಡನ್ ಎಡಿಟ್ ಪ್ರಶಸ್ತಿ ಯನ್ನು ಅಝೀಜ್ ಗೂನಡ್ಕ ಪಡೆದರು. 

ಹಸೈ ಕೆ ಎಲ್ ಜಿ ವಂದನಾರ್ಪಣೆ ಗೈದರು, ಕಾರ್ಯಕ್ರಮವನ್ನು ಫಾರೂಕ್ ಕಾನಕ್ಕೋಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು,

ಕಾರ್ಯಕ್ರಮದಲ್ಲಿ ಅಡ್ಮಿನ್ ಶಾಕಿರ್ ಶೈನ್, ಕಾರ್ಯಕ್ರಮ ಸಂಯೋಜಕರಾದ ಅಝೀಮ್ ಮತ್ತು ಶಿಬಿನ್ ಹಾಗೂ ಟೌನ್ ಓಫ್ ಕೆ ಎಲ್ ಜಿ ಸದಸ್ಯರು ಸಹಕರಿಸಿದರು.

m

Related Posts