ಸಂಪಾಜೆ ಗ್ರಾಮದ ಮುಂಡಡ್ಕ ಪಾಂಬರ್ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು

ಕಾರ್ಯಕ್ರಮವನ್ನು ಪೂಜೆಯ ಮೂಲಕ ಶ್ರೀರಾಮ್ ಭಟ್ ಸಂಪಾಜೆ ನೇರವೇರಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಗದೀಶ್ ರೈ ಗುದ್ದಲಿ ಪೂಜೆ ನೇರವೇರಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಸಹಕರಿಸಿದಾಗ ಉತ್ತಮ ಕೆಲಸ ಮಾಡಲು ಸಾಧ್ಯ ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ಇರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ,ವಿಮಲಾ ಪ್ರಸಾದ್, ಗ್ರಾಮಸ್ಥರಾದ ಎಚ್ . ಹಮೀದ್ ಪಂಬಾರ್, ಮಹಮದ್ ಕುಂಞಿ ಸಂಪಾಜೆ, ಶರೀಫ್ ಸಂಪಾಜೆ, ಹಮೀದ್/ಅಮ್ಮೀ ಸಂಪಾಜೆ, ಇಸ್ಮಾಯಿಲ್ ಸಂಪಾಜೆ ಶ್ರೀಮತಿ ಗೀತಾ ಸರಸ್ವತಿ ಭಟ್, ಉಪಸ್ತಿತರಿದ್ದರು ಜಿ ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ವಂದಿಸಿದರು.





m
