ವಿಶ್ವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮರ 1500 ನೇ ಜನ್ಮ ದಿನಾಚರಣೆಗಾಗಿ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಎಲಿಮಲೆಯಲ್ಲಿ ಎಲಿಮಲೆ ಜಮಾಅತರ *ಮೀಲಾದ್ ಸಮಿತಿ 2025* ನೂತನ ಸಮಿತಿಯು ನೂರುಲ್ ಹುದಾ ಮದ್ರಸದಲ್ಲಿ ಎಲಿಮಲೆ ಮುದರ್ರಿಸರಾದ ಕುಂಜಿಲಂ ಸೆಯ್ಯದ್ ಮುಹ್ಸಿನ್ ತಂಙಳ್ ರವರ ನೇತೃತ್ವದಲ್ಲಿ ರಚನೆಗೊಂಡಿತು.
ಗೌರವಾಧ್ಯಕ್ಷರಾಗಿ ಸಯ್ಯದ್ ಮುಹ್ಸಿನ್ ಸೈದಲವಿ ಕೋಯ ಅಲ್ ಬುಖಾರಿ ಕುಂಜಿಲಂ ತಂಙಳ್.
ಚಯರ್ಮೇನ್ ಅಬೂಬಕ್ಕರ್ ಪಾಣಾಜೆ.
ಅಧ್ಯಕ್ಷರಾಗಿ ಹಾರಿಸ್ ಪಳ್ಳಿಕಲ್
ಪ್ರಧಾನ ಕಾರ್ಯದರ್ಶಿಯಾಗಿ ಫೈಝಲ್ ಜೀರ್ಮುಕಿ.
ಕೋಶಾಧಿಕಾರಿಯಾಗಿ ಅಶ್ರಫ್ ಜಿ ಎ ಕೆ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಸೂಫಿ ಎಲಿಮಲೆ, ಹಾಗೂ
ಹಸನ್ ಹರ್ಲಡ್ಕ.
ಜೊತೆ ಕಾರ್ಯದರ್ಶಿಗಳಾಗಿ ಬಾತಿಶಾ ಹಾಜಿ ಜೀರ್ಮುಕಿ, ಮತ್ತು ಸಿದ್ದೀಕ್ ಎಲಿಮಲೆ, ಹಾಗೂ ಮೀಡಿಯಾ ಕಂಟ್ರೋಲರ್ ಸಾಬಿತ್ ಹಿಕಮಿಯವರು ಆಯ್ಕೆಯಾದರು. ಉಳಿದಂತೆ ಇಪ್ಪತ್ತ ಮೂರು ಮಂದಿಯನ್ನು ಸದಸ್ಯರಾಗಿ ಆರಿಸಲಾಯಿತು.
ಜಮಾಅತ್ ಕಮಿಟಿಯ ಅಧೀನದಲ್ಲಿ ಕಾರ್ಯಾಚರಿಸಲಿರುವ ಮೀಲಾದ್ ಸಮಿತಿಯು ಈದ್ ಮೀಲಾದ್ ಪ್ರಯುಕ್ತ ಜೀರ್ಮುಕ್ಕಿ ಹಾಗೂ ಎಲಿಮಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಿದ್ದು ವ್ಯವಸ್ಥಿತವಾಗಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು..

ಜಮಾಅತ್ ಕಮಿಟಿ ಅಧ್ಯಕ್ಷ ಪಾಣಾಜೆ ಅಬ್ದುಲ್ ಕಾದರ್. ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಕಿ. ಕೋಶಾಧಿಕಾರಿ ಜಿ. ಎಸ್ ಅಬ್ದುಲ್ಲ, ಸದಸ್ಯರಾದ ಅಹಮದ್ ಕುಂಞಿ, ಸೂಫಿ ಮುಸ್ಲಿಯಾರ್,ಅಬ್ದುಲ್ಲ ಜಿ.ಎ.ಕೆ. ನುಸ್ರತ್ ಉಪಾಧ್ಯಕ್ಷರಾದ ಹೈದರ್ ಹಾಜಿ, ಅಬ್ದುಲ್ ಕಾದರ್ .ಹಿರಿಯರಾದ ಮಹಮ್ಮದ್ ಕುಂಞಿ ಮೇಲೆಬೈಲು, ಮಹಮ್ಮದ್ ಹಾಜಿ ಹರ್ಲಡ್ಕ. ಉಪಸ್ಥಿತರಿದ್ದರು.
ಸೂಫಿ ಎಲಿಮಲೆ ಸ್ವಾಗತಿಸಿದರು. ಸೆಯ್ಯಿದ್ ಕುಂಜಿಲಂ ತಂಙಳ್ ರವರು ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಸಲಹೆ ನೀಡಿ ದುವಾಶೀರ್ವಚನ ನೀಡಿದರು.




m
