Featured, ಇತರೆ, ಸ್ಥಳೀಯ

ಮಡಿಕೇರಿ : ಚೆಂಬು ಕಾಡಾನೆ ದಾಳಿಗೆ ವ್ಯಕ್ತಿ ದಾರುಣ ಮೃತ್ಯು : ದಬ್ಬಡ್ಕ ಕೊಪ್ಪದ ಶಿವಪ್ಪ ಮೃತಪಟ್ಟ ವ್ಯಕ್ತಿ

ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಆನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ ಮೃತಪಟ್ಟ ವ್ಯಕ್ತಿ ದಬ್ಬಡ್ಕ ಕೊಪ್ಪದ ಶಿವಪ್ಪ 72( ವ) ಎಂದು ತಿಳಿದು ಬಂದಿದೆ.ಅವರು ಅ.6ರ ರಾತ್ರಿ ಸುಮಾರು 10.30 ರ ಸಮ ಮನೆಯ ಹತ್ತಿರದ ತೋಟದಲ್ಲಿ ನಾಯಿ ಬೋಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ ಹೋದ ಸಂದರ್ಭ ದಲ್ಲಿ ಆನೆ ತುಳಿದಿದೆ.ಅವರನ್ನು ಮನೆಯವರು ತಕ್ಷಣವೇ ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಮೃತ ಪಟ್ಟಿದ್ದಾರೆನ್ನಲಾಗಿದೆ.ಮೃತ ದೇಹ ವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಎಂದು ತಿಳಿದು ಬಂದಿದೆ

ವರದಿ : ತಾಜುದ್ದೀನ್ ಅರಂತೋಡು

m

Related Posts