Featured, ಅಂಕಣ, ಸ್ಥಳೀಯ

ಬದ್ರಿಯಾ ಮಸೀದಿ ದೇವರಕೊಲ್ಲಿ: 79 ನೇ ಸ್ವಾತಂತ್ರ್ಯ ದಿನಾಚರಣೆ

ದೇವರಕೊಲ್ಲಿ: ಬದ್ರಿಯಾ ಮಸೀದಿ ದೇವರಕೊಲ್ಲಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು, ಬೆಳಗ್ಗೆ 6 ಗಂಟೆಗೆ ಮದ್ರಸ ವಠಾರದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಹನೀಫ ಎಂ ಎಸ್ ರವರು ಧ್ವಜಾರೋಹಣ ನೆರವೇರಿಸಿದರು, ಮಸೀದಿ ಇಮಾಮ್ ಜಲೀಲ್ ಸಖಾಫಿ ಮಾತನಾಡಿ ದೇಶದಲ್ಲಿ ಭಾರತ ಒಂದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ, ಇದು ಕೇವಲ ಒಂದು ಜಾತಿಗೂ ಒಂದು ಮತಕ್ಕೂ ಮೀಸಲಾದ ದೇಶವಲ್ಲ ಇಲ್ಲಿ ಜೀವಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ ಎಂದು ಹೇಳಿ ಸರ್ವರಿಗೂ ಸ್ವಾತಂತ್ರ ದಿನಾಚರಣೆಯ ಶುಭ ಹಾರೈಸಿದರು, ಜಮಾಅತ್ ಸಮಿತಿ ಕಾರ್ಯದರ್ಶಿ ಮುಸ್ತಫಾ ಟಿ ಎಂ ರವರು ಮಾತನಾಡಿ ಪ್ರಜಾಪ್ರಭುತ್ವವನ್ನು ಗೌರವಿಸುವ ಭಾರತವು ಹಲವು ಭಾಷೆಗಳಿಂದ ಧರ್ಮಗಳಿಂದ ಮತಗಳಿಂದ ಅಲಂಕೃತವಾದ ದೇಶವಾಗಿದೆ ಎಂದು ಹೇಳುತ್ತಾ ಸರ್ವರಿಗೂ ಸ್ವಾತಂತ್ರ ದಿನಾಚರಣೆಯ ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ಸರ್ವ ಜಮಾಅತ್ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

m

Related Posts