ದೇವರಕೊಲ್ಲಿ:- ಬದ್ರಿಯಾ ಮಸೀದಿ ದೇವರಕೊಲ್ಲಿ ಅಧೀನದಲ್ಲಿರುವ ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಏಪ್ರಿಲ್ 9 ಬುಧವಾರ ಬೆಳಗ್ಗೆ 7 ಗಂಟೆಗೆ ಮದ್ರಸ ಸಭಾಂಗಣದಲ್ಲಿ ಆಕ್ಸರಲೋಕಕ್ಕೆ ಮೊದಲ ಹೆಜ್ಜೆ ಫತ್ಹೇ ಮುಬಾರಕ್ ಕಾರ್ಯಕ್ರಮ ನಡೆಯಿತು, ಮದ್ರಸ ಅಧ್ಯಾಪಕರಾದ ಅಬ್ದುಲ್ ಜಲೀಲ್ ಸಖಾಫಿ ದುಆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮದ್ರಸ ವಿದ್ಯಾಭ್ಯಾಸದ ಮಹತ್ವವನ್ನು ವಿವರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಹಂಸ ಕೆ ಸಿ ವಹಿಸಿದರು, ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಟಿ ಎಂ, ಸದಸ್ಯರಾದ ಬಶೀರ್ ಈ ಕೆ, ಸಮೀರ್ ಟಿ ಬಿ, ನಾಸಿರ್ ಜೋಡುಪಾಲ, ಹಾಗೂ ವಿದ್ಯಾರ್ಥಿಗಳು ಪೋಷಕರು ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು





m
