ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (AMYA) ಗುತ್ತಿಗಾರು ವತಿಯಿಂದ ಸಂಸ್ಥೆಯ ಉಪಾಧ್ಯಕ್ಷರಾದ ಆಸಿಫ್ ಒಳಲಂಬೆ ಅವರು ಉಮ್ರಾ ಯಾತ್ರೆಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಯಾತ್ರಿಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಎ ಎಮ್ ವೈ ಎ ಅಧ್ಯಕ್ಷ ಹಮೀದ್ ಎಚ್.ಎಂ, ಕಾರ್ಯದರ್ಶಿ ಕಲಂದರ್ ಬಾಕಿಲ, ಜಮಾತ್ ಕಮಿಟಿ ಕಾರ್ಯದರ್ಶಿ ಹಸೈನಾರ್ ಒಳಲಂಬೆ, ಹಾರಿಸ್ ಸಅದಿ ಹಾಜರಿದ್ದರು.
ಜಮಾತ್ ಖತೀಬ್ ಸುಲೈಮಾನ್ ಸಾಆದಿ ಉಸ್ತಾದ್ ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾರಿಸ್ ಸಅದಿ ವಂದಿಸಿದರು.





m

