Featured, ಇತರೆ, ಸ್ಥಳೀಯ

ಪೈಚಾರ್ ಪರಿಸರದಲ್ಲಿ ಹೆಚ್ಚಾದ ಬೀದಿ ನಾಯಿ ಹಾವಳಿ : ಆತಂಕದಲ್ಲಿ ಸಾರ್ವಜನಿಕರು..!!

ಪೈಚಾರ್, ಆಗಸ್ಟ್ 26: ಪೈಚಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಲ್ಬಣವಾದ ಹಾವಳಿ ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಮೂಡಿಸಿದೆ. ಈ ಬೆಳವಣಿಗೆಯ ಬಗ್ಗೆ ಗಮನಹರಿಸಿ ನಗರಾಡಳಿತ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಶೀರ್ ಆರ್. ಬಿ ನಗರಾಡಳಿತವನ್ನು ಒತ್ತಾಯಿಸಿದ್ದಾರೆ

ಪೈಚಾರ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಹೋಗುವಾಗ ಸಾರ್ವಜನಿಕರು ನಡೆದಾಡುವ ವೇಳೆ ನಾಯಿಗಳು ದಾಳಿ ನಡೆಸುತ್ತವೆ. ಈಗಾಗಲೇ ಐದಾರು ಮಂದಿ ನಾಯಿಗಳಿಂದ ಕಚ್ಚಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೈಚಾರ್ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಹೋಟೆಲ್‌ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತದೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯಪಡುತ್ತಾರೆ. ಹಗಲಿನಲ್ಲಿ ಸಾಧುವಂತೆ ವರ್ತಿಸುವ ಶ್ವಾನಗಳು ಸಂಜೆಯಾಗುತ್ತಿದ್ದಂತೆ ಮೃಗದಂತೆ ಕೆರಳಿ ನಿಲ್ಲುತ್ತವೆ. ಈ ಸಮಯದಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ಹೊರಬರಲು ಹೆದರುತ್ತಾರೆ. ಸೈಕಲ್‌ ಮತ್ತು ಬೈಕ್‌ ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಈ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ.

ಕಸದ ರಾಶಿ ನಾಯಿಗಳ ಮತ್ತೊಂದು ಅಡ್ಡೆಯಾಗಿದ್ದು, ತ್ಯಾಜ್ಯದಲ್ಲಿನ ಆಹಾರ ತಿನ್ನಲು ಶ್ವಾನಗಳ ಗುಂಪುಗಳ ನಡುವೆ ಕಾದಾಟ ನಡೆಯುತ್ತಲೆ ಇರುತ್ತದೆ. ಈ ವೇಳೆ ಚಲಿಸುವ ವಾಹನಗಳಿಗೆ ಅಡ್ಡ ಬಂದು ವಾಹನ ಸವಾರರು ಬೀಳುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡಿ ಹಲವು ತಿಂಗಳು ಕಳೆದಿದೆ. ನಾಯಿಗಳ ಉಪಟಲಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ನಾಯಿಗಳ ಹಾವಳಿಯಿಂದ ಬೀದಿಯಲ್ಲಿ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮನೆಗೆ ಅವಶ್ಯಕ ವಸ್ತು ತರಲು ಅಂಗಡಿಗೆ ಹೋಗಲು ಭಯಪಡುವಂತಾಗಿದೆ ಸಂಭಂದಿಸಿದ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಸೂಕ್ತವಾದ ಕ್ರಮ ಕೈಗೊಳ್ಳಲು ವಿನಂತಿಸುತ್ತಿದ್ದೆನೆ

m

Related Posts