Featured, ಅಂಕಣ, ಸ್ಥಳೀಯ

ಸುಳ್ಯ ನ್ಯಾಯಾಲಯಕ್ಕೆ ನೂತನ ಸಂಕೀರ್ಣ: ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸುಳ್ಯ : ಸುಳ್ಯ ತಾಲೂಕಿನ ಹಳೆಯ ನ್ಯಾಯಾಲಯಕ್ಕೆ ಬದಲಾಗಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಮಂಜೂರು ಮಾಡುವಂತೆ ಇಂದು ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಅವರಿಗೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮನವಿಯನ್ನು ಸಲ್ಲಿಸಿದರು.

ಸುಳ್ಯ ನ್ಯಾಯಾಲಯವು 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹಳೆಯ ಕಟ್ಟಡದಲ್ಲಿ ಹಂಚಿನ ಮೇಲ್ಚಾವಣಿಯಡಿ ನ್ಯಾಯಾಲಯದ ಕಲಾಪಗಳು ನಡೆಯುತ್ತಿರುವುದರಿಂದ ಮಳೆಗಾಲದಲ್ಲಿ ಹಲವು ತೊಂದರೆಗಳು ಎದುರಾಗುತ್ತಿವೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಸಂಕೀರ್ಣ ನಿರ್ಮಾಣ ಅಗತ್ಯವಿದೆ ಎಂದು ಶಾಸಕಿ ಮನವಿಯಲ್ಲಿ ಉಲ್ಲೇಖಿಸಿದರು.

 

ಮನವಿ ಸ್ವೀಕರಿಸಿದ ಸಚಿವ ಎಚ್.ಕೆ. ಪಾಟೀಲ ಅವರು ಬೇಡಿಕೆಯನ್ನು ಪರಿಗಣಿಸಿ ಶೀಘ್ರದಲ್ಲೇ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ಭರವಸೆ ನೀಡಿದರು.

m

Related Posts