ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗಿ

ದೇಶದ ಮತ ಕಳ್ಳತನದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಮತ್ತು ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆಗೆ ಬೆಂಬಲವಾಗಿ ದ ಕ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆ. 25ರಂದು ಸಂಜೆ ಬೃಹತ್ ಪಂಜಿನ ಮೆರವಣಿಗೆ.
ಮಂಗಳೂರು ನವಭಾರತ ಸರ್ಕಲ್ ನಿಂದ ಮಹಾನಗರ ಪಾಲಿಕೆ ಮುಂಭಾಗದವರೆಗೆ ನಡೆದ ಪಂಜಿನ ಮೆರವಣಿಗೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜ ಜೆ ಆರ್ ಲೋಭೋ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಬಂಟ್ವಾಳ, ದ. ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಸುಳ್ಯ ಬ್ಲಾಕ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆ ಗುತ್ತು ಮತ್ತು ಪ್ರಮುಖ ನಾಯಕರು ಉದ್ಘಾಟಿಸಿದರು.
ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರ ನೇತೃತ್ವದಲ್ಲಿ ಸುಳ್ಯದಿಂದ ಭಾಗವಹಿಸಿದ ಪ್ರಮುಖ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಸುಳ್ಯ ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಸತ್ಯಕುಮಾರ್ ಆಡಿಂಜಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಧಾಕೃಷ್ಣ ಪರಿವಾರಕಾನ, ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಭೋಜಪ್ಪ ನಾಯ್ಕ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಭಾಗೀಶ್ ಕೆ ಟಿ, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಪ್ರಮೋದ್ ಬೊಳ್ಳಾಜೆ, ಇಕ್ಪಾಲ್ ಸುಣ್ಣಮೂಲೆ, ಪಕಿರೇಶ್ ಜಯನಗರ, ಉಮೇಶ್ ಕುದ್ಪಾಜೆ, ಇಬ್ರಾಹಿಂ ಕಾಸಿಂ, ರಕ್ಷಿತ್ ದೊಡ್ಡಡ್ಕ, ಪ್ರೇಮ ಹರೀಶ್ವರನ್ (ಗಾಂಧಿ) ಅಡ್ಯಡ್ಕ, ಶರವಣ ಕುಮಾರ್ ಮೇದಿನಡ್ಕ, ನವೀನ್ ಅಜ್ಜಾವರ, ಪ್ರಕಾಶ್ ಪಾತೆಟ್ಟಿ, ಮಂಜುನಾಥ್ ಮಡ್ತಿಲ, ಇಬ್ರಾಹಿಂ ಜಯನಗರ, ಅಕ್ಷತ್ ಜಯನಗರ, ರಕ್ಷಣ್ ಉಬರಡ್ಕ, ದೀಕ್ಷಿತ್ ಉಬರಡ್ಕ, ತನ್ವಿತ್ ರಾಜ್ ಸುಳ್ಯ, ಮಿಥುನ್ ಅಡ್ಯಡ್ಕ, ಮನೀಶ್ ಅಡ್ಯಡ್ಕ ಭಾಗವಹಿಸಿದ್ದರು.





m

