ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಲೋಕ ಮುಸ್ಲಿಮರು ಸಜ್ಜಾಗಿದ್ದಾರೆ. ಪುಣ್ಯ ಪ್ರವಾದಿಯರ ಜನ್ಮದಿನದಿಂದ ಅನುಗ್ರಹೀತಗೊಂಡ ಪುಣ್ಯ ರಬೀಉಲ್ ಅವ್ವಲ್ ತಿಂಗಳ ಆಗಮನವಾಗುತ್ತಿದೆ.
ನಾಳೆ ಆಗಸ್ಟ್ 28 ರಂದು ಗುರುವಾರ ಮಗ್ರಿಬ್ ನಮಾಝ್ ಬಳಿಕ ಸುನ್ನಿ ಮಹಲ್ ಮಂಚಿಯಲ್ಲಿ ಪ್ರಮುಖ ಆಧ್ಯಾತ್ಮಿಕ ನಾಯಕ ಪ್ರಖ್ಯಾತ ವಾಗ್ಮಿ, ತನ್ನ ಅಗಾಧ ಪಾಂಡಿತ್ಯ ಮತ್ತು ಜ್ಞಾನದೊಂದಿಗೆ ಸ್ಪಷ್ಟ, ನಿರರ್ಗಳ ಪ್ರಭಾಷಣ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಮೂಲಕ ಜನಮನಗೆದ್ದ ಬಹುಮಾನ್ಯರಾದ ನೂರುಸ್ಸಾದಾತ್ ಸಯ್ಯಿದ್ ಬಾಯಾರ್ ತಂಙಳ್ ರವರಿಂದ ಬೃಹತ್ ಹುಬ್ಬುರ್ರಸೂಲ್ ಪ್ರಭಾಷಣ ಮತ್ತು ಪ್ರಾರ್ಥನಾ ಸಂಗಮ ನಡೆಯಲಿದೆ ಎಂದು ಅಹ್ಮದ್ ಹಾಶಿಮಿ ಕುರಿಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






m
