Featured, ಅಂಕಣ, ಸ್ಥಳೀಯ

ಭಾರತದ ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸಿದ ಕೇಂದ್ರದ ಮೋದಿ ಸರಕಾರ ಕೆ.ಪಿ ಜಾನಿ

ಕೇಂದ್ರ ಸರಕಾರ ಭಾರತದ ಸಾಂಪ್ರದಾಯಿಕ ವಿದೇಶಾಂಗನೀತಿಯನ್ನು ದುರ್ಬಲಗೊಳಿಸಿ ದಿನಕ್ಕೊಂದು ಹೊಂದಾಣಿಕೆಯ ನಿಲುವುಗಳನ್ನು ಸ್ವೀಕರಿಸುತ್ತಿರುವುದು ದೇಶದ ರಕ್ಷಣೆಯ ವಿಷಯದಲ್ಲಿ ಅಪಾಯಕಾರಿ ನಿಲುವು ಆಗಿರುತ್ತದೆ. ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ ಕಳವಳ ವ್ಯಕ್ತಪಡಿಸಿರುತ್ತಾರೆ. ಮೋದಿ ಸರಕಾರ ತನ್ನ ಗೆಳೆಯರ ಬ್ಯುಸಿನೆಸ್ಗೆ ಅನುಕೂಲಮಾಡಿಕೊಡುವುದೇ ಈಯೆಲ್ಲಾ ಆವಾಂತರಗಳಿಗೆ ಕಾರಣ .ಇತ್ತೀಚಿನ ವರದಿಯ ಪ್ರಕಾರ ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾತೈಲ ಕರೀದಿಸಿ ಅದರ ಲಾಭ ದೇಶದ ಜನತೆಗೆ ಸಿಗದೆ ವಿದೇಶಗಳಿಗೇ ಮರಳಿ ಮಾರಾಟ ಮಾಡಿ ರಿಲಯನ್ಸ್ ಮತ್ತು ನಯಾರ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿ ಲಾಭಗಳಿಸುವಂತೆ ಮಾಡುತ್ತಿರುವುದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಇಡೀ ರಾಷ್ಟ್ರವೇ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣ ಆದರೂ ಅಚ್ಚರಿಪಡಬೇಕಿಲ್ಲ. ಭಾರತಕ್ಕೆ ನಿಜವಾದ ಆತಂಕ ಇರುವುದೇ ಚೀನಾದಿಂದ ನಮ್ಮೂರಿನಲ್ಲಿ ಬಡವರ ಕಾರ್ಮಿಕರ ಮಹಿಳೆಯರ ಪರ ಸಂವಿಧಾನಬದ್ದ ಹೋರಾಟ ಮಾಡುವವರನ್ನು ಚೀನಾದ ಏಜೆಂಟ್ ಗಳೆಂದು ಜರೆಯುವ ಬಿಜೆಪಿಯವರು, ಇತ್ತೀಚೆಗೆ ಚೀನಾದ ಗಡಿಯಲ್ಲಿ ಕಾದಾಡಿ ಹುತಾತ್ಮರಾದ ನಮ್ಮ ವೀರಯೋಧರ ನೆನಪು ಕಾಡುತ್ತಿರುವಾಗಲೇ ಮೋದಿಯವರ ಚೀನಾದೊಂದಿಗಿನ ಹಸ್ತಲಾಘವದ ಕಾರಣಕ್ಕೆ ಮೋದಿಯವರನ್ನು ಯಾವ ಏಜೆಂಟ್ ಎಂದು ಕರೆಯಬಹುದು ಎನ್ನುವ ಕುತೂಹಲ ಕಾಡುತ್ತಿದೆ. ಒಂದುವೇಳೆ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಯುದ್ಧದ ಸ್ಥಿತಿ ನಿರ್ಮಾಣವಾದರೆ ಚೀನಾ ಖಂಡಿತಾ ಪಾಕಿಸ್ತಾನದ ಪರ ನಿಲ್ಲಲಿದೆ ಎನ್ನುವುದಕ್ಕೆ ಮೊನ್ನೆ ಮೊನ್ನೆ ನಡೆದ ಆಪರೇಷನ್ ಸಿಂದೂರ್ ಸಮಯದಲ್ಲಿ ಒಳಗಿಂದೊಳಗೆಯೇ ಪಾಕಿಸ್ತಾನವನ್ನು ಬೆಂಬಲಿಸಿರುವುದೇ ಸಾಕ್ಷಿ. ಬಿಜೆಪಿಯವರು ಎಷ್ಟೇ ಸಬೂಬುಗಳನ್ನು ಹೇಳಿದರೂ ಚೀನಾ ಈಗಾಗಲೇ ಲಕ್ಷಾಂತರ ಕೋಟಿಯ ಧೀರ್ಘಕಾಲೀನ ಯೋಜನೆಗಳನ್ನು ಪಾಕಿಸ್ತಾನವನ್ನು ನಂಬಿಕೊಂಡು ಆರಂಭಿಸಿಯಾಗಿದೆ. ಆದ್ದರಿಂದ ಚೀನಾ ಪಾಕಿಸ್ತಾನವನ್ನು ಬಿಟ್ಟುಕೊಡಲು ಸಾದ್ಯವಿಲ್ಲ. ಹೀಗಿರುವಾಗ ಚೀನಾದೊಂದಿಗಿನ ಭಾರತದ ಸ್ನೇಹ ಕತ್ತಲೆಯಲ್ಲಿ ಕಂಡ ಹೊಂಡಕ್ಕೆ ಹಗಲು ಬೀಳುವುದು ಎನ್ನುವ ಗಾದೆ ಮಾತಿಗೆ ಪೂರಕವಾಗಿದೆ .ಮಾತ್ರವಲ್ಲ ಹಿಂದೆ ಚೀನಾದೊಂದಿಗಿನ ವ್ಯವಹಾರದಲ್ಲಿ ಮೋದಿ ಸರಕಾರದ ವಿವೇಚನಾರಹಿತ ಉತ್ಪ್ರೇಕ್ಷಿತ ನಡವಳಿಕೆ ಎರಡು ರಾಷ್ಟ್ರಗಳ ಮಧ್ಯೆ ಅವಿಶ್ವಾಸದ ಕಂದಕವನ್ನೂ ಸೃಷ್ಟಿಸಿರುವುದೂ ಸತ್ಯ. ಆದ್ದರಿಂದ ಈ ಸ್ನೇಹ ದೇಶದ ಜನತೆಯನ್ನು ಆತಂಕಕ್ಕೆ ದೂಡಿರುವುದಂತೂ ಸತ್ಯ.ಈಗಿನ ಈ ಸ್ಥಿತಿಯು ದೇಶದ 140 ಕೋಟಿ ಜನರ ಹಿತಕಾಯುವ ದೃಷ್ಟಿಯಿಂದ ಅಲ್ಲ ಬೆರಳೆಣಿಕೆಯ ಒಂದಿಬ್ಬರು ಕಾರ್ಪೊರೇಟ್ ಗೆಳೆಯರ ಸಂರಕ್ಷಣೆಗಾಗಿ ಮಾತ್ರವಾಗಿದೆ.ಆದ್ದರಿಂದ ಈ ಕಾರ್ಪೊರೇಟ್ ಉದ್ದಿಮೆದಾರ ಕೇಂದ್ರಿತ ಸರಕಾರವು ತೊಲಗಿ ಜನಪರ ಸರಕಾರ ಮರಳಿ ಸ್ಥಾಪಿಸಲ್ಪಡುವುದೊಂದೇ ಇದಕ್ಕಿರೋ ಪರಿಹಾರ. ಎಂದುಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

m

Related Posts