Featured, ಆರೋಗ್ಯ, ಸ್ಥಳೀಯ

ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮದಿನಾಚರಣೆ: ಬೆಳ್ಳಾರೆಯಲ್ಲಿ ಬೃಹತ್ ಮಿಲಾದ್ ರ‍್ಯಾಲಿ

ಸಕಲ ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯ ಬೆಳಕಾಗಿ ಬಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮದಿನಾಚರಣೆ ಈ ವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ

ಬೆಳ್ಳಾರೆ: ಝಖರಿಯ್ಯಾ ಜುಮಾ ಮಸ್ಜಿದ್ ,ಹಿದಾಯತುಲ್ ಇಸ್ಲಾಂ ಸೆಕಂಡರಿ ಮದ್ರಸ. ಹಿದಾಯ ಅರೇಬಿಕ್ ಮದ್ರಸ, ಬಹ್ಜತು ತ್ವಲಬಾ ದರ್ಸ್ ಬೆಳ್ಳಾರೆ ಇದರ  ವತಿಯಿಂದ   ದಾರುಲ್ ಹಿಕ್ಮಾ ಇಸ್ಲಾಮಿಕ್ ಸೆಂಟರ್, ಹಾಗೂ ದಾರುಲ್ ಹುದಾ ತಂಬಿನಮಕ್ಕಿ ಸಹಯೋಗದೊಂದಿಗೆ ಬೆಳ್ಳಾರೆ ಜಮಾಅತ್ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ರವರ  ನೇತೃತ್ವದಲ್ಲಿ ಭ್ರಹತ್ ಮಿಲಾದ್ ರ‍್ಯಾಲಿ ಇಂದು ಜರುಗಿತು.
ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಸ್ಕೌಟ್ ಹಾಗೂ ದಫ್ ತಂಡದೊಂದಿಗೆ ದಾರುಲ್ ಹಿಕ್ಮ , ಬೆಳ್ಳಾರೆ ದರ್ಸ್ ಹಾಗೂ  ದಾರುಲ್ ಹುದಾ ಸಂಸ್ಥೆಯ ವಿದ್ಯಾರ್ಥಿಗಳು, ಬೆಳ್ಳಾರೆ ಹಾಗೂ ತಂಬಿನಮಕ್ಕಿ ಜಮಾಅತ್ ಅಧ್ಯಕ್ಷರು ಪದಾಧಿಕಾರಿಗಳು, ಜಮಾಅತರು ಹಲವು ಸಂಘಸಂಸ್ಥೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೆಳ್ಳಾರೆ ಮಸೀದಿ  ಮುದರ್ರಿಸರಾದ ಬಹು ನಸೀಹ್ ದಾರಿಮಿ ಹಾಗೂ ದಾರುಲ್ ಹುದಾ ತಂಬಿನಮಕ್ಕಿ ಮ್ಯಾನೇಜರ್ ಖಲೀಲ್ ಹಿಮಮಿ  ಸಂದೇಶ ಭಾಷಣ ಮಾಡಿದರು. ಬೆಳ್ಳಾರೆ ಮದ್ರಸ ಸದರ್ ಮುಅಲ್ಲಿಮ್ ಬಹು ಮುಹಮ್ಮದ್ ಮುಸ್ಲಿಯಾರ್  ಕಾರ್ಯಕ್ರಮ ನಿರ್ವಹಿಸಿದರು.
ಬೆಳ್ಳಾರೆ ಟೌನ್ ಬಾಯ್ಸ್  ಕಾರ್ಯಕರ್ತರು ಸಹಕರಿಸಿದರು.

m

Related Posts