Featured, ಅಂಕಣ, ಸ್ಥಳೀಯ

“ನವಚೇತನ ಯುವಕಮಂಡಲ ಬೊಳುಬೈಲು: ಮುಕ್ತಿಧಾಮದಲ್ಲಿ ಸ್ವಚ್ಚತಾ ಶ್ರಮದಾನ”

ನವಚೇತನ ಯುವಕಮಂಡಲ(ರಿ) ಬೊಳುಬೈಲು ಮತ್ತು ಗ್ರಾಮ ಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ಇಂದು ಆಡ್ಕಾರು ಕೋನಡ್ಕ ಪದವು ಎಂಬಲ್ಲಿರುವ ಮುಕ್ತಿಧಾಮದ(ಹಿಂದೂ ರುದ್ರಭೂಮಿ) ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.

2020ರಲ್ಲಿ  ಗ್ರಾಮ ಪಂಚಾಯತ್ ನ ನರೇಗಾ ಯೋಜನೆಯಿಂದ ಮುಕ್ತಿದಾಮವು ನಿರ್ಮಾಣಗೊಂಡಿತ್ತು.ಹಲವಾರು ಶವಗಳಿಗೆ ಮುಕ್ತಿಯನ್ನು ನೀಡಿದ್ದ ಧಾಮವು  ನಂತರದ ದಿನಗಳಲ್ಲಿ  ನಿರ್ವಹಣೆಯಿಲ್ಲದೆ ಪಾಳು ಬಿದ್ದ ಪರಿಣಾಮವಾಗಿ ಇಲ್ಲಿ ಶವಗಳನ್ನು ಸುಡುತ್ತಿರಲಿಲ್ಲ ಪಕ್ಕ ಸುಳ್ಯಕ್ಕೆ ಬಾಡಿಗೆ ನೀಡಿ ಅಂಬ್ಯುಲೆನ್ಸ್ ಮೂಲಕ ತೆಗೆದುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಇದನ್ನು ಮನಗಂಡ ನವಚೇತನ ಯುವಕಮಂಡಲ (ರಿ) ಬೊಳುಬೈಲು  ಪಂಚಾಯತ್ ಸಹಯೋಗದೊಂದಿಗೆ  ಸ್ವಚ್ಚತಾ ಕಾರ್ಯವನ್ನು ಇಂದು ನಡೆಸಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಆಡ್ಕಾರು ಬೈಲು ಆರಂಭದಿಂದ ಕೊನೆಯವರೆಗೆ  ಸ್ವಚ್ಚತೆಯಲ್ಲಿ ಪಾಲ್ಗೊಂಡರು.

ಸ್ವಚ್ಚತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಗಣ್ಯರು, ವಾರ್ಡನ ಸದಸ್ಯರಾದ ಸಂಧ್ಯಾ ವಾಗ್ಲೆ , ಅಡ್ಕಾರು ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಹರಿಪ್ರಕಾಶ್ ಆಡ್ಕಾರು.PWD ಗುತ್ತಿಗೆದಾರ ಉದಯ್ ವಾಗ್ಲೆ ಆಡ್ಕಾರು, ಗೋಪಾಲ ಬೈಲು ಸ್ಥಳಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. 

ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಗುತ್ತಿಗೆದಾರ ಉದಯ ವಾಗ್ಲೆ ಅವರು ನೀಡಿದರು. ಅಡುಗೆಯಲ್ಲಿ  ಕಾಟೂರು ಶಿವರಾಮ ಗೌಡ ದಂಪತಿಗಳು ಸಹಕರಿಸಿದರು.ಶ್ರಮದಾನದಲ್ಲಿ ಭಾಗವಹಿಸಿದರು ಸಂಸ್ಥೆಯ ಪೂರ್ವಧ್ಯಕ್ಷರಾದ ದಯಾನಂದ ಪಿಲಿಕೊಡಿ,ಜಯಪ್ರಕಾಶ್ ಬೈತಡ್ಕ, ನಿತಿನ್ ಆರ್ಭಡ್ಕ, ಭುವನ್ ಬೊಳುಬೈಲು, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಕಾಟೂರು,ಕಾರ್ಯದರ್ಶಿ ಚಿತ್ತರಂಜನ್ ಕಾಟೂರು, ಸದಸ್ಯರುಗಳಾದ  ಪ್ರವೀಣ್ ಕಾಟೂರು, ರಂಜಿತ್ ಕಾಟೂರು,ದೀಪಕ್ ಕಾಯರಡ್ಕ,ಯಕ್ಷಿತ್ ಆರ್ಭಡ್ಕ,ಮೋಕ್ಷಿತ್ ಆರ್ಭಡ್ಕ, ಜಶ್ವಿತ್ ಕಾಟೂರು, ಪ್ರಜ್ವಿನ್ ಕಾಟೂರು ಉಪಸ್ಥಿತರಿದ್ದರು.

m

Related Posts