Featured, ಇತರೆ, ಸ್ಥಳೀಯ

ಸುಳ್ಯ : ಸಂಪಾಜೆ ಇ.ಆರ್. ಕುಟುಂಬದ ಅಬ್ಬುಲ್ಲಾ ಕುಂಞಿ ನಿಧನ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪ್ರತಿಷ್ಠಿತ ಇ.ಆರ್. ಕುಟುಂಬದ ಸದಸ್ಯ ಇ.ಆರ್. ಅಬ್ಬುಲ್ಲಾ ಕುಂಞಿ  ಅವರು ಅಲ್ಪಕಾಲದ ಅಸೌಖ್ಯದಿಂದ (ಸೆ.8) ರಂದು ನಿಧನರಾದರು.

ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ವೈದ್ಯಕೀಯ ಸಲಹೆಯ ಮೇರೆಗೆ ಮನೆಗೆ ಮರಳುತ್ತಿದ್ದ  ವೇಳೆ ದಾರಿಮಧ್ಯೆ ಕೊನೆಯುಸಿರೆಳೆದರು.

ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು  ಒರ್ವ ಗಂಡು ಹಾಗೂ  ಸಹೋದರರಾದ ಉದ್ಯಮಿ ಹನೀಫ್, ಮೊಹಿದ್ದೀನ್, ನಾಸೀರ್, ಬೆಂಗಳೂರಿನಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿರಾಜುದ್ದೀನ್, ಸಹೋದರಿಯರು ಹಾಗೂ ಅಪಾರ ಬಂಧು ಬಳಗ, ಮಿತ್ರ ವೃಂದವನ್ನು ಅಗಲಿದ್ದಾರೆ.

m

Related Posts