Featured, ಅಂಕಣ, ಸ್ಥಳೀಯ

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ನೂತನ ಅಧ್ಯಕ್ಷೆಯಾಗಿ ಶಮಾ ಆಯ್ಕೆ

ಬೆಳ್ತಂಗಡಿ (ಸೆ-23):ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬೆಳ್ತಂಗಡಿ ಪಕ್ಷದ ಕಚೇರಿಯಲ್ಲಿ ನಡೆಯಿತು. ಚುನಾವಣಾ ಪ್ರಕ್ರಿಯೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ನ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಝೈನಬಾ ನಡೆಸಿಕೊಟ್ಟರು.

ನೂತನ ಕ್ಷೇತ್ರಾಧ್ಯಕ್ಷೆಯಾಗಿ ಶಮಾ ಉಜಿರೆ, ಕಾರ್ಯದರ್ಶಿಯಾಗಿ ರುಬಿಯಾ, ಉಪಾಧ್ಯಕ್ಷೆಯಾಗಿ ನಸೀಮಾ ಬಿ.ಎ, ಜೊತೆ ಕಾರ್ಯದರ್ಶಿ ಸೌದಾ ಎಸ್.ಕೆ, ಕೋಶಾಧಿಕಾರಿಯಾಗಿ ಹಸೀನಾ, ಸಮಿತಿ ಸದಸ್ಯರಾಗಿ ತಸ್ಲಿಮಾ, ಮಸೂದ, ಅಸ್ಮಾ, ಸುಮಯ್ಯ ಆಯ್ಕೆಯಾದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಬಂಟ್ವಾಳ ಉಪಸ್ಥಿತರಿದ್ದರು.

m

Related Posts