ಕರ್ನಾಟಕದಲ್ಲಿ ಕಾಂಗ್ರೆಸ್ ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸೆಪ್ಟೆಂಬರ್ 22 ರಿಂದ ನಡೆಸುತ್ತಿರುವಂತಹ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಹಿಂದೂ ಧರ್ಮವನ್ನು ಒಡೆಯುವ ಒಂದು ಸಂಚಿನ ಭಾಗ ಆಗಿದೆ, ಮತ್ತು ಇದು ಪುಂಡಾಟಿಕೆ ಮತ್ತು ಬೂಟಾಟಿಕೆಯ ಸಮೀಕ್ಷೆಯಾಗಿದೆ.
ಒಬ್ಬ ವ್ಯಕ್ತಿಯ ಧರ್ಮ ಅವನ ಹುಟ್ಟಿನಿಂದ ಬಂದಿರುತ್ತದೆ . ಆದರೆ ಜಾತಿಗಣತಿ ಸಮೀಕ್ಷೆಯ ನೆಪದಲ್ಲಿ ರಾಜ್ಯ ಸರಕಾರ ಸಂಪ್ರದಾಯಕ್ಕೆ ವಿರುದ್ಧವಾಗಿ ಸುಮಾರು 48 ಜಾತಿಗಳ ಪಟ್ಟಿಯನ್ನು ಉಲ್ಲೇಖಿಸುವ ಮೂಲಕ ಜನರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವತಿಯಿಂದ ನಡೆಯುತ್ತಿರುವಂತಹ ಜಾತಿ ಗಣತಿ ಸಮೀಕ್ಷೆಗಾಗಿ ಅಧಿಕಾರಿಗಳು ಮನೆಗೆ ಬರುವಂತಹ ಸಂದರ್ಭದಲ್ಲಿ ಎಲ್ಲರೂ ಬಹಳ ಎಚ್ಚರಿಕೆಯಿಂದ ಮಾಹಿತಿಯನ್ನು ನೀಡಬೇಕೆಂದು ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತೇನೆ. ಬಹಳ ಪ್ರಾಮುಖ್ಯವಾಗಿ ಎಲ್ಲಾ ಹಿಂದೂಗಳು ಧರ್ಮದ ಕಾಲಂನಲ್ಲಿ ಸ್ಪಷ್ಟವಾಗಿ ಹಿಂದೂ ಎಂದು ನಮೂದಿಸಬೇಕು ಮತ್ತು ಮುಂದಿನ ಹಂತದಲ್ಲಿ ಅದಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿಗಳನ್ನು ಎಚ್ಚರಿಕೆಯಿಂದ ನೀಡಬೇಕು ಎಂದು ಈ ಮೂಲಕ ಎಲ್ಲಾ ಹಿಂದೂ ಬಾಂಧವರಲ್ಲಿ ಈ ಮೂಲಕ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಿನಾಃ ಕಾರಣ ಆಗಿರುವ ಗೊಂದಲಗಳನ್ನು ರಾಜ್ಯ ಸರಕಾರ ತಕ್ಷಣ ಸರಿಪಡಿಸಬೇಕೆಂದು ಆಗ್ರಹಿಸುತ್ತೇನೆ.





m

