ಸುಳ್ಯ : ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಖತೀಬರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಹು ಅಬೂಬಕ್ಕರ್ ಸಿದ್ದೀಖ್ ಸಖಾಫಿ ಅಲ್ ಹರ್ಷದಿ ಉಸ್ತಾದರು ಉದ್ಯೋಗ ನೀಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿರುವುದರಿಂದ ಜಮಾಅತ್ ವತಿಯಿಂದ ಬೀಳ್ಕೊಡುಗೆ ಮತ್ತು ಶಾಲು ಹೊದಿಸಿ ಸ್ಮರಣಿಕೆ ಪುರಸ್ಕಾರ ನೀಡಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಮತ್ತು ಪದಾಧಿಕಾರಿಗಳು ಹಾಗೂ ಜಮಾಅತ್ ಮಾಜಿ ಅದ್ಯಕ್ಷರು ಗಳಾದ ಹಾಜಿ ಪಿ ಎ ಉಮ್ಮರ್ ಗೂನಡ್ಕ ಹಾಜಿ ಅಬ್ದುಲ್ಲಾ ಕೊಪ್ಪದ ಕಜೆ ಎಂ ಬಿ ಇಬ್ರಾಹಿಂ, ಡಿ ಆರ್ ಅಬ್ದುಲ್ ಖಾದರ್,ಕರ್ನಾಟಕ ಸರಕಾರದ ಹಿರಿಯ ನಿವೃತ ಅಧಿಕಾರಿ ಇಬ್ರಾಹಿಂ ಗೂನಡ್ಕ ಹಿರಿಯರಾದ ಹಾಜಿ ಅಬ್ಬಾಸ್ ಗೂನಡ್ಕ ಟಿ ಎಂ ಮಮ್ಮು ಮಹಮ್ಮದ್ ಕುಂಭಕೋಡ್,ಸೋಪಾ ಮುಹಮ್ಮದ್,ಅಲ್ ಅಮೀನ್ ಅಧ್ಯಕ್ಷರಾದ ಸಾದಿಕ್ ಕುಂಬಕೋಡ್ ಮತ್ತು ಪದಾಧಿಕಾರಿಗಳು, ಮುಅಲ್ಲಿಮರಾದ ಸವಾದ್ ಮದನಿ ಪ್ರಧಾನ ಕಾರ್ಯದರ್ಶಿ ಎಸ್ ಎ ಅಶ್ರಪ್, ಕರ್ನಾಟಕ ಮುಸ್ಲಿಂ ಜಮಾಅತ್ ಯುನಿಟ್ ಅದ್ಯಕ್ಷರಾದ ಉಮ್ಮರ್ ಪುತ್ರಿ ಹಾಗೂ ಪದಾದಿಕಾರಿಗಳು ಎಸ್ ವೈ ಎಸ್ ಅದ್ಯಕ್ಷರಾದ ಮುನೀರ್ ಪ್ರಗತಿ ಹಾಗೂ ಪದಾದಿಕಾರಿಗಳು ಎಸ ಎಸ್ ಎಪ್ ಅದ್ಯಕ್ಷರಾದ ಉನೈಸ್ ಪಿ ಯು ಮತ್ತು ಪದಾದಿಕಾರಿಗಳು ಯುಎಇ ಘಟಕದ ಪ್ರತಿನಿಧಿ ಬದ್ರುದ್ದೀನ್ ಬೈಲೆ ಅಲ್ಲದೆ, ಜಮಾಅತ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




m

