Featured, ಅಂಕಣ, ಸ್ಥಳೀಯ

ಕನ್ನಡದಲ್ಲಿ ‘ವಿಶ್ವಾಸಪೂರ್ವಂ’ ಈಗ ‘ಪ್ರೀತಿಯಿಂದ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ

ಮುಖ ಪುಟ ಬಿಡುಗಡೆ– ಆನ್‌ಲೈನ್‌ ಬುಕ್ಕಿಂಗ್ ಆರಂಭ

ಮಂಗಳೂರು: ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ಆತ್ಮಕಥೆ ‘ವಿಶ್ವಾಸಪೂರ್ವಂ’ ನ ಕನ್ನಡ ಅನುವಾದ ‘ಪ್ರೀತಿಯಿಂದ’ ಕೃತಿಯ ಮುಖ ಪುಟವನ್ನು ಬಿಡುಗಡೆ ಮಾಡಲಾಗಿದೆ.

ಮಾರ್ಕಝ್ ನೊಲಡ್ಜ್ ಸಿಟಿಯನ್ನು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಮಲಬಾರ್ ಫೌಂಡೇಶನ್ ಈ ಪುಸ್ತಕವನ್ನು ಪ್ರಕಟಿಸುತ್ತಿದೆ.

ಈ ಆತ್ಮಕಥೆಯ ವಿತರಣೆ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಪಶ್ಚಿಮ ಸಮಿತಿಯ ನೇತೃತ್ವದಲ್ಲಿ ನಡೆಯಲಿದೆ.

ಮಲಯಾಳಂ ಭಾಷೆಯ ‘ವಿಶ್ವಾಸಪೂರ್ವಂ’ ಕಡಿಮೆ ಅವಧಿಯಲ್ಲೇ ಸುಮಾರು ಎಪ್ಪತ್ತು ಆವೃತ್ತಿಗಳು ಮಾರಾಟಗೊಂಡಿದೆ.

ಈ ಪುಸ್ತಕದ ಆರ್ಡರ್‌ಗಳನ್ನು ಈಗ kmjbookshop.com ವೆಬ್‌ಸೈಟ್‌ನಲ್ಲಿ ಸ್ವೀಕರಿಸಲಾಗುತ್ತಿದೆ.

ಪುಸ್ತಕದ ಬೆಲೆ ₹600, ಆದರೆ ಪ್ರೀ-ಪ್ರಕಾಶನ ಆಫರ್‌ನಲ್ಲಿ ಕೇವಲ ₹400 ಕ್ಕೆ ಲಭ್ಯ.

ಪ್ರಕಾಶನ ಸಮಾರಂಭದಲ್ಲಿ ಕೂಟಂಬಾರ ಅಬ್ದುರಹ್ಮಾನ್ ದಾರಿಮಿ, ದಕ್ಷಿಣ ಕನ್ನಡ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್, ಅಹ್ಮದ್ ಬಶೀರ್ ಸೇರಿದಂತೆ ಅನೇಕ ಪಂಡಿತರು ಮತ್ತು ನಾಯಕರು ಭಾಗವಹಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಂಖ್ಯೆ: +91 87 22 77 11 77 ಎಂದು ಪ್ರಕಾಶಕರು ತಿಳಿಸಿದ್ದಾರೆ.

m

Related Posts