ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) SSF ಕರ್ನಾಟಕ 13ನೇ ಆವೃತಿ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಪಾಲಿಬೆಟ್ಟ ಮುಹಿಮ್ಮಾತ್ತುದ್ದೀನ್ ಮದ್ರಸಾ ವಿದ್ಯಾರ್ಥಿ ಆದಿಲ್ ಬಿ.ಎ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸೆಪ್ಟಂಬರ್ 26,27,28 ತಾರೀಖುಗಳಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವದ ಜೂನಿಯರ್ ವಿಭಾಗದ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನವಂಬರ್ 15,16 ತಾರೀಖುಗಳಲ್ಲಿ ಗುಲ್ಬರ್ಗಾ ದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಪದಾಧಿಕಾರಿಗಳು, ಮುಹಿಮ್ಮಾತ್ತುದ್ದೀನ್ ಮದ್ರಸಾ ಅಧ್ಯಾಪಕ ವೃಂದ, SBS ಪಾಲಿಬೆಟ್ಟ ಯುನಿಟ್ ಸಮಿತಿ ಆದಿಲ್ ನ ವಿಶೇಷ ಸಾಧನೆಯ ಬಗ್ಗೆ ಶ್ಲಾಘಿಸಿದರು.





m
