Featured, ಅಂಕಣ, ಸ್ಥಳೀಯ

ಕರ್ನಾಟಕದ ಅಂಡರ್–19 ಕ್ರಿಕೆಟ್ ತಂಡಕ್ಕೆ ಮಂಗಳೂರಿನ ರೆಹಾನ್ ಮೊಹಮ್ಮದ್ ಆಯ್ಕೆ

ಮಂಗಳೂರು: ಕರಾವಳಿ ನಗರಿ ಮಂಗಳೂರಿನ 17 ವರ್ಷದ ಪ್ರತಿಭಾವಂತ ಕ್ರಿಕೆಟಿಗ ರೆಹಾನ್ ಮೊಹಮ್ಮದ್ ರಾಷ್ಟ್ರೀಯ ಕ್ರಿಕೆಟ್ ವೇದಿಕೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ವಳವೂರಿನ ತುಂಬೆಯ ಮೂಲದ ಕ್ರಿಯಾತ್ಮಕ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರೆಹಾನ್, ಬಿಸಿಸಿಐ ವಿನೂದ್ ಮಂಕಡ್ ಟ್ರೋಫಿ (2025–26) ಗಾಗಿ ಕರ್ನಾಟಕ ಅಂಡರ್–19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ, ಪ್ರತಿಭಾವಂತ ಯುವ ಕ್ರಿಕೆಟಿಗ ರೆಹಾನ್ ಮೊಹಮ್ಮದ್, ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಪರಿಣಾಮ ರೆಹಾನ್ ಅವರಿಗೆ ಈ ಗೌರವ ಸಿಕ್ಕಿದೆ. ಹ್ಯಾರಿಸ್ ಮೊಹಮ್ಮದ್ ಮತ್ತು ತಬಸ್ಸುಮ್ ಅವರ ಪುತ್ರ ರೆಹಾನ್ ಮೊಹಮ್ಮದ್, ಮೂಲತಃ ಮಂಗಳೂರಿನವರಾಗಿದ್ದು, ಸಧ್ಯ ಬೆಂಗಳೂರು ನಿವಾಸಿಗಳಾಗಿದ್ದಾರೆ

m

Related Posts