ಅತೀ ಪುರಾಣ ಮತ್ತು ಪ್ರಸಿದ್ದಿ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೊಹಿದ್ಧೀನ್ ಜುಮಾ ಮಸೀದಿ ಅಧೀನದಲ್ಲಿರುವ ತೆಕ್ಕಿಲ್ ಮೊಹಮದ್ ಹಾಜಿ ಸ್ಮಾರಕ ತಕ್ವಿಯತುಲ್ ಇಸ್ಲಾಂ ಮದರಸ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಿಂದ ಸಚಿವ ಜಮೀರ್ ಅಹಮದ್ ಖಾನ್ 10 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಅನುದಾನ ಬಿಡುಗಡೆಗಾಗಿ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಪೇರಡ್ಕ ಗೂನಡ್ಕ ಮೋಹಿದ್ದೀನ್ ಜುಮ ಮಸ್ಜಿದ್ ಅಧ್ಯಕ್ಷರಾದ ಟಿ.ಎಂ ಶಾಹೀದ್ ತೆಕ್ಕಿಲ್ ರವರ ಮಾನ್ಯ ವಸತಿ ಅಲ್ಪಸಂಖ್ಯಾತರ ಇಲಾಖೆ ಹಾಗು ವಕ್ಪ್ ಸಚಿವ ಝಮೀರ್ ಅಹಮ್ಮದ್ ಖಾನ್ ಅವರಿಗೆ ಮನವಿ ಮಾಡಿದ್ದರು, ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಇರುವ ಪುರಾತನ ಸಂಸ್ಥೆಗೆ ಹಣ ಬಿಡುಗಡೆ ಗೊಳಿಸಿದ ಮಾನ್ಯ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಮಸೀದಿಯ ಉಪಾಧ್ಯಕ್ಷರಾದ ಟಿ ಬಿ ಹನೀಫ್, ಎಂ ಆರ್ ಡಿ ಎ ಅಧ್ಯಕ್ಷರಾದ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆಯ ಅಧ್ಯಕ್ಷರಾದ ಮುನೀರ್ ದಾರಿಮಿ ಅಭಿನಂದಿಸಿದ್ದಾರೆ.





m
