Featured, ಇತರೆ, ಸ್ಥಳೀಯ

ಬಿಜೆಪಿಯ ಮತಕಳ್ಳತನದ ವಿರುದ್ದ ಸಂಪಾಜೆಯಲ್ಲಿ ಸಾಮೂಹಿಕ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮತದಾನದ ಹಕ್ಕು  ಪ್ರಜೆಗಳಿಗೆ ಪ್ರಜಾಪ್ರಭುತ್ವದ ಅತ್ಯುನ್ನತ ಕೊಡುಗೆಯಾಗಿದೆ .ಇದರ ಹಿಂದೆ ಕಾಂಗ್ರೆಸ್ ಪಕ್ಷದ ಅನೇಕ ವರ್ಷಗಳ ಹೋರಾಟವಿದೆ. ಲಕ್ಷಾಂತರ ಪ್ರಜೆಗಳ ತ್ಯಾಗ ಬಲಿದಾನಗಳ ಇತಿಹಾಸವಿದೆ ಬಿಜೆಪಿ ಯು ಜನರ  ಈ ಪವಿತ್ರವಾದ ಹಕ್ಕನ್ನು ಅಕ್ರವಾಗಿ ಕಸಿದುಕೊಂಡಿರುವುದರ ಸ್ಪಷ್ಟ ದಾಖಲೆಯನ್ನು ಇತ್ತೀಚೆಗೆ ಲೋಕಸಭೆಯ ವಿರೋಧಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಬಿಡುಗಡೆ ಮಾಡಿರುತ್ತಾರೆ. ಹಿಂದೆ ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ಬ್ರಿಟೀಷರು ದೇಶವನ್ನು ಆಳಿದಂತೆಯೇ ಇದೀಗ ದೇಶದ ಪ್ರಜಾಪ್ರಭುತ್ವದ ವಿರುದ್ದ ಮತ್ತೊಂದು ಹುನ್ನಾರವು ನಡೆಯುತ್ತಿರುವುದರ ಸತ್ಯ ಬೆಳಕಿಗೆ ಬಂದಿದೆ. ದೇಶದ ಒಂದೆರಡು ಕಾರ್ಪೊರೇಟ್ ಕಂಪೆನಿಗಳ ಒತ್ತಾಸೆಯಂತೆ ಬಿಜೆಪಿ ನೇತ್ರತ್ವದ ಸರಕಾರ ಪ್ರಜೆಗಳ ಹಕ್ಕುಗಳನ್ನು ಕಸಿಯಲು ಹೊರಟಿದೆ. ಬಿಜೆಪಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನೈಜ ಜನಾಭಿಪ್ರಾಯ ಇರಲಿಲ್ಲ  ಎನ್ನುವುದು ಇದೀಗ ಖಚಿತಗೊಳ್ಳುತ್ತಿದೆ.

ಮತಕಳ್ಳತನ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎನ್ನುವುದು ರಾಹುಲ್ ಗಾಂಧಿ ಬಿಡುಗಡೆಗೊಳಿಸಿದ ದಾಖಲೆಗಳು ಸ್ಪಷ್ಟಪಡಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು ಈ ಮತಕಳ್ಳತನದ ವಿರುದ್ದ ಇಡೀ ದೇಶದಲ್ಲಿ ಜನಾಕ್ರೋಶ ರೂಪುಗೊಳ್ಳುತ್ತಿದೆ,ಅದರಂತೆ ಸಂಪಾಜೆಯಲ್ಲಿ ಕೂಡಾ ಸಾರ್ವಜನಿಕರಿಂದ ಸಾಮೂಹಿಕ ಸಹಿಸಂಗ್ರಹ ಅಭಿಯಾನಕ್ಕೆ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಶ್ರೀ ಕೆ.ಪಿ ಜಾನಿ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶ್ರೀ ಮಹಮ್ಮದ್ ಕುಂಞಿ ಗೂನಡ್ಕ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ ,ಸುಳ್ಯ ತಾಲೂಕು ಅಲ್ಪಸಂಖ್ಯಾತ ಘಟಕದ ಕೋಶಾಧಿಕಾರಿಗಳಾದ ಶ್ರೀ ತಾಜ್ ಮಹಮ್ಮದ್ ,ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ವಸಂತ ಪೆಲ್ತಡ್ಕ ,ಸಂಪಾಜೆ ವಲಯ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎ.ಕೆ.ಹನೀಫ ಉಪಸ್ತಿತರಿದ್ದರು ಮತ್ತು ಸಂಪಾಜೆಯ ನಾಗರೀಕರಿಂದ ಸಹಿಸಂಗ್ರಹ ಕಾರ್ಯಕ್ರಮ ನಡೆಯಿತು.

 

Related Posts