ಸುಳ್ಯ, ನ.1 — ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಶಕ್ತಿ ವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದ ಉನೈಸ್ ಪೇರಾಜೆ ಅವರು ಪಕ್ಷದ ಒಳಗಿನ ತಾರತಮ್ಯ, ಗುಂಪುಗೋಸು ಮತ್ತು ರಾಜಕೀಯ ಒತ್ತಾಸೆಗಳಿಂದ ಬೇಸತ್ತು, ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಉನೈಸ್ ಪೇರಾಜೆ ಅವರು ಪಕ್ಷದ ಹಿತಾಸಕ್ತಿ, ಸಿದ್ಧಾಂತ ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸದಾ ಧ್ವನಿ ಎತ್ತಿದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ಕೆಲ ನಾಯಕರ ವೈಯಕ್ತಿಕ ರಾಜಕೀಯ ಮತ್ತು ಅಸಮಾನ್ಯ ನಿರ್ಧಾರಗಳು ಅವರಂತಹ ನಿಷ್ಠಾವಂತ ಕಾರ್ಯಕರ್ತರ ಮನೋಭಾವಕ್ಕೆ ಧಕ್ಕೆಯಾದಂತಾಗಿದೆ. “ನಾನು ಪಕ್ಷದಲ್ಲಿ ಸ್ಥಾನ ಅಥವಾ ಪ್ರಭಾವಕ್ಕಾಗಿ ಉಳಿದವನಲ್ಲ. ಜನರ ಪರ ಹೋರಾಟಕ್ಕಾಗಿ ರಾಜಕೀಯ ವೇದಿಕೆ ಬೇಕಿತ್ತು. ಆದರೆ ಪಕ್ಷದ ಒಳಗಿನ ತಾರತಮ್ಯ ಮತ್ತು ಒತ್ತಾಸೆಗಳು ಜನಸೇವೆಗಿಂತ ಸ್ವಾರ್ಥದ ರಾಜಕೀಯವನ್ನು ಮುಂದಿಟ್ಟಿವೆ. ಈ ವಾತಾವರಣದಲ್ಲಿ ಕೆಲಸ ಮುಂದುವರಿಸಲು ಸಾಧ್ಯವಿಲ್ಲವೆಂದು ಭಾಸವಾಯಿತು.”ರಾಜೀನಾಮೆ ನೀಡಿದ ನಂತರ ತಮ್ಮ ಪ್ರತಿಕ್ರಿಯೆಯಲ್ಲಿ ಉನೈಸ್ ಪೇರಾಜೆ ಹೇಳಿದರು.





m
