Featured, ಅಂಕಣ, ಸ್ಥಳೀಯ

ಸುಳ್ಯ: ವಿಧ್ಯಾರ್ಥಿ ಮೇಲೆ ಸರಕಾರಿ ಶಾಲೆಯ ಶಿಕ್ಷಕನಿಂದ ತೀವ್ರ ಹಲ್ಲೆ; ದೂರು ದಾಖಲು

ಸುಳ್ಯ, ನ.1; ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮ ವ್ಯಾಪ್ತಿಗೆ ಒಳಪಡುವ ಕೋಲ್ಚಾರು ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕ ಮನುಕುಮಾರ್ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಗಂಭೀರ ಗಾಯಗೊಂಡ ವಿಧ್ಯಾರ್ಥಿ ತಂದೆ ಹಾಗೂ ತಾಯಿ ಇಬ್ಬರು ಕೂಡ ವಿಕಲಚೇತನರು ಎನ್ನಲಾಗಿದೆ.

ಶಿಕ್ಷಕ ಮನುಕುಮಾರ್ ವಿಧ್ಯಾರ್ಥಿ ಮೇಲೆ ತೀವ್ರ ಹಲ್ಲೆ ನಡೆಸಿದ್ದು ವಿಧ್ಯಾರ್ಥಿ ಕೈ ಮುರಿತವಾಗಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಪೋಷಕರು ಕಠಿಣ ಕ್ರಮ ಆಗ್ರಹಿಸಿ ಸುಳ್ಯ ಪೋಲಿಸ್ ಠಾಣೆ ಹಾಗೂ ಚೈಲ್ಡ್ ಕೇರ್ ಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

m

Related Posts