ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ, ಮಲಗುವ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ ಪತ್ನಿ ಕೋಣೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ದಂಗಾಗಿದ್ದಾರೆ..,??

ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಇರುವೆಗಳ ಫೋಬಿಯಾದಿಂದ (Myrmecophobia) ಭಯಪಟ್ಟು ಬದುಕುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಸ್ಥಳೀಯ ಮೂಲಗಳ ಪ್ರಕಾರ, ಯುವತಿಯು ಹಲವು ದಿನಗಳಿಂದ ಇರುವೆಗಳ ಭಯದಿಂದ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಸದುಪಯೋಗಪಡಿಸಿಕೊಂಡು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ನೋಟ್ನಲ್ಲಿ ಯುವತಿ ಇರುವೆಗಳ ಬಗ್ಗೆ ಇರುವ ಅತಿಯಾದ ಭಯವೇ ತನ್ನ ಜೀವ ತೆಗೆದುಕೊಳ್ಳಲು ಕಾರಣ ಎಂದು ಉಲ್ಲೇಖಿಸಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ (Hospital) ರವಾನೆ ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯ ಆತ್ಮಹತ್ಯೆಗೆ ಕಾರಣವಾದದ್ದು ಇರುವೆಗಳ ಬಗ್ಗೆ ಇರುವ ಮನೋಭಯ (Fear) ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ಘಟನೆಯ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದ್ದು, ಕುಟುಂಬದವರಿಂದ ಕೂಡ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈ ಘಟನೆ ಸ್ಥಳೀಯವಾಗಿ ಆತ್ಮಹತ್ಯೆಯ ಮಾನಸಿಕ ಕಾರಣಗಳ ಬಗ್ಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಏನಿದು ಮೈರ್ಮೆಕೊಫೋಬಿಯಾ?
ಇರುವೆಗಳ ಬಗ್ಗೆ ವಿವರಿಸಲಾಗದ ಭಯ ಅಥವಾ ದ್ವೇಷ . ಇದು ಒಂದು ರೀತಿಯ ನಿರ್ದಿಷ್ಟ ಭಯ . ಮೈರ್ಮೆಕೊಫೋಬಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಕೀಟಗಳ ಬಗ್ಗೆ ಮತ್ತು ಜೇಡಗಳ ಬಗ್ಗೆ ಹೆಚ್ಚಿನ ಭಯವನ್ನು ಹೊಂದಿರುವುದು ಸಾಮಾನ್ಯವಾಗಿದೆ. ಅಂತಹ ಸಮಸ್ಯೆಯನ್ನ ಎಂಟೊಮೊಫೋಬಿಯಾ (Entomophobia) ಎಂದೂ ಕರೆಯಲಾಗುತ್ತದೆ . ಈ ಭಯವು ಹಲವಾರು ವಿಧಗಳಲ್ಲಿ ಪ್ರಕಟವಾಗಬಹುದು. ಉದಾಹರಣೆಗೆ ಇರುವೆಗಳು ಆ ವ್ಯಕ್ತಿಯ ಆಹಾರವನ್ನ ಕಲುಷಿತಗೊಳಿಸುವ ಭಯ ಅಥವಾ ಹೆಚ್ಚಿನ ಸಂಖ್ಯೆಯ ಇರುವೆಗಳು ಮನೆಯ ಮೇಲೆ ಆಕ್ರಮಣ ಮಾಡುವ ಭಯ. ಹೀಗೆ ಇತ್ಯಾದಿ ಸಮಸ್ಯೆಗಳನ್ನ ಅನುಭವಿಸಬಹುದು.
ಮೈರ್ಮೆಕೊಪೋಬಿಯಾ ಲಕ್ಷಣಗಳು
ಮೈರ್ಮೆಕೊಫೋಬಿಯಾ ಇದ್ದ ಜನರು ಆತಂಕ, ನಿದ್ರಾಹೀನತೆ, ಬೆವರುವುದು, ಹೆಚ್ಚಿದ ಹೃದಯ ಬಡಿತ, ಉಸಿರಾಟದ ತೊಂದರೆ, ಉರುಳುವಿಕೆ, ಗಾಬರಿ, ವಾಕರಿಕೆ, ಒಣ ಬಾಯಿ, ತಲೆತಿರುಗುವಿಕೆ, ತಲೆನೋವು ಮತ್ತು ಮರಗಟ್ಟುವಿಕೆಯಂತಹ ಸಮಸ್ಯೆ ಅನುಭವಿಸಬಹುದು. ಇದಕ್ಕೆ ಚಿಕಿತ್ಸೆ ಸಹ ಇದೆ. ಮೊದಲಿಗೆ ಇರುವೆಗಳ ವಿಡಿಯೋ ತೋರಿಸುವ ಮೂಲಕ ಪ್ರಾರಂಭಿಸಬಹುದು. ನಂತರ ಅಂತಿಮವಾಗಿ ಅವರನ್ನು ನಿಜ ಜೀವನದಲ್ಲಿ ಇರುವೆಗಳ ಬಳಿ ಇರುವಂತೆ ಮಾಡಬಹುದು. ಇರುವೆಗಳು ಮತ್ತು ಕೀಟಗಳ ಭಯವನ್ನು ಕಡಿಮೆ ಮಾಡಲು ಇದು ಹಲವು ಮಾರ್ಗಗಳಲ್ಲಿ ಒಂದಾಗಿರಬಹುದು. ಇದಲ್ಲದೆ, ಇತರ ಚಿಕಿತ್ಸೆಗಳು ಈ ಭಯವನ್ನು ನಿವಾರಿಸುತ್ತದೆ.

