ಇತರೆ, ಸ್ಥಳೀಯ

ಸುಳ್ಯ : ಬೋರುಗುಡ್ಡೆ : ಕುಕ್ಕರ್ ಸಿಡಿದು —ಅಡುಗೆಮನೆಗೆ ಹಾನಿ : ಮನೆಮಂದಿ ಅಪಾಯದಿಂದ ಪಾರು!

ಸುಳ್ಯ, ನವೆಂಬರ್ 19 (ಬುಧವಾರ): ಬೋರುಗುಡ್ಡೆ ಅಬ್ಬುಲ ಅಡ್ಕತ್ಬೈಲ್ ಅವರ ಮನೆಯಲ್ಲಿ ಇಂದು ಮುಂಜಾನೆ ಅಡುಗೆಯ ತಯಾರಿ ಸಮಯದಲ್ಲಿ ಗ್ಯಾಸ್ ಒಲೆಯಲ್ಲಿ ಇದ್ದ ಕುಕ್ಕರ್ ಸಿಡಿದು ಅಡುಗೆಮನೆಗೆ ಭಾಗಶಃ ಹಾನಿಯಾದ ಘಟನೆ ವರದಿಯಾಗಿದೆ.

ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದ ಪರಿಣಾಮ ಅಡುಗೆಮನೆಯ ಗೋಡೆ, ಟೈಲ್ಸ್‌, ಮೇಲ್ಚಾವಣಿ ಹಾಗೂ ಅಡುಗೆ ಸಾಮಾನುಗಳು ಹಾನಿಗೊಳಗೊಂಡಿವೆ. ಘಟನೆ ಸಂಭವಿಸಿದ ವೇಳೆ ಮನೆಮಂದಿ ಅಡುಗೆಮನೆ ಸಮೀಪದಲ್ಲೇ ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Related Posts