ಸುನ್ನೀ ಜಂಇಯ್ಯತುಲ್ ಮುಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಆಯೋಜಿಸಿದ ಮದ್ರಸ ಅದ್ಯಾಪಕರುಗಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸುಳ್ಯ ರೇಂಜಿನ ಅದ್ಯಾಪಕರುಗಳು ಸಾಧನೆಗೈದಿದ್ದಾರೆ
ಹೈ ಝೋನ್ ವಿಭಾಗದ ಮಲಯಾಳ ಭಾಷಣ ಸ್ಪರ್ಧೆಯಲ್ಲಿ ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಪ್ರಥಮ ಸ್ಥಾನ ಪಡೆದು,ಗ್ರೌಂಡ್ ಝೋನ್ ವಿಭಾಗದ ಕವ್ವಾಲಿ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಗಾಂಧಿನಗರದ ಇರ್ಫಾನ್ ಸಅದಿ ಜೋಗಿಬೆಟ್ಟು,ಅನ್ಸಾರಿಯಾ ಅರಬಿಕ್ ಮದ್ರಸದ ಸೆಯ್ಯಿದ್ ಹುಸೈನ್ ಪಾಷಾ ತಂಙಳ್,ಜಾಲ್ಸೂರಿನ ಹಯಾತುಲ್ ಇಸ್ಲಾಂ ಮದ್ರಸದ ಝುನೈದ್ ಹಿಮಮಿ ಸಖಾಫಿ ದ್ವಿತೀಯ ಬಾರಿಗೆ ರಾಜ್ಯಕ್ಕೆ ಪ್ರಥಮರಾಗಿದ್ದಾರೆ.
ಗ್ರೌಂಡ್ ಝೋನ್ ವಿಭಾಗದ ಮಲಯಾಳ ಸಿಂಗಲ್ ಸೋಂಗ್ ಸ್ಪರ್ಧೆಯಲ್ಲಿ ಗಾಂಧಿನಗರದ ಇರ್ಫಾನ್ ಸಅದಿ ಜೋಗಿಬೆಟ್ಟು ಪ್ರಥಮರಾಗಿ, ಹೈಝೋನ್ ವಿಭಾಗದ ಮಲಯಾಳ ಗ್ರೂಪ್ ಸೋಂಗ್ ನಲ್ಲಿ ಗಾಂಧಿನಗರ ಮದ್ರಸದ ಹುಸೈನಾರ್ ಮದನಿ ಕುಂಜಿಲ,ಅಬೂಬಕ್ಕರ್ ಸಖಾಫಿ ಅಯ್ಯಂಗೇರಿ,ಇರ್ಫಾನ್ ಹಿಮಮಿ,ಮೊಗರ್ಪಣೆಯ ನೂರುಲ್ ಇಸ್ಲಾಂ ಮದ್ರಸದ ಅಬ್ದುಲ್ ಕರೀಂ ಸಖಾಫಿ ಯವರು ದ್ವಿತೀಯ ಸ್ಥಾನ ಪಡೆದು,ಹೈ ಝೋನ್ ವಿಭಾಗದ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಗಾಂಧಿನಗರ ಮದ್ರಸದ ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ದ್ವಿತೀಯ ಸ್ಥಾನ ಗಳಿಸಿ ಸಾಧನೆಗೈದಿದ್ದಾರೆ.





m

