ಇಂದು ಪೆರಾಜೆ ಮಣ್ಣಿಗೆ ಖ್ಯಾತ ಇಸ್ಲಾಮಿಕ್ ವಾಗ್ಮಿ ಕಬೀರ್ ಬಾಖವಿ
ಪೆರಾಜೆ: ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ.) ಪೆರಾಜೆಯ 16ನೇ ವಾರ್ಷಿಕ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿರುವ ಐದು ದಿನಗಳ ಇಸ್ಲಾಮಿಕ್ ಧಾರ್ಮಿಕ ಕಾರ್ಯಕ್ರಮದ ಸರಣಿಯಲ್ಲಿ ಇಂದು ಪ್ರಭಾಷಣ ಲೋಕದ ಅಬ್ಬುತ ವಾಗ್ಮಿ ಎಂದೇ ಪ್ರಸಿದ್ಧ ರಾದ ಖ್ಯಾತ ಇಸ್ಲಾಮಿಕ್ ವಾಗ್ಮಿ ಕಬೀರ್ ಬಾಖವಿ ಅವರು ಪೆರಾಜೆ ಮಣ್ಣಿಗೆ ಆಗಮಿಸಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ ಧಾರ್ಮಿಕ ಜ್ಞಾನ, ಆತ್ಮೀಯ ಸಂದೇಶ ಮತ್ತು ಮನಮುಟ್ಟುವ ಮಾತಿನ ಶೈಲಿಯಿಂದ ಪ್ರಸಿದ್ಧರಾದ ಕಬೀರ್ ಬಾಖವಿ ಅವರ ಪ್ರಭಾಷಣಕ್ಕಾಗಿ ಪೆರಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.

ಸುಳ್ಯ: ಪೆರಾಜೆ, ಕೊಡಗು ಮೂಲದ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ.) ನ 16ನೇ ವಾರ್ಷಿಕೋತ್ಸವದ ಅಂಗವಾಗಿ ಐದು ದಿನಗಳ ಇಸ್ಲಾಮಿಕ್ ಧಾರ್ಮಿಕ ಕಾರ್ಯಕ್ರಮಗಳ ಸರಣಿ ಹಮ್ಮಿಕೊಳ್ಳಲಾಗಿದೆ. ಟ್ರಸ್ಟ್‌ನ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಗಳ ಸ್ಮರಣಾರ್ಥವಾಗಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಗಳು ‘ಮೆ ಫಿಲೆ ಮದೀನ’ ಎಂಬ ಥೀಮ್‌ನಡಿ ನಡೆಯಲಿದ್ದು, ವಿವಿಧ ಧಾರ್ಮಿಕ ಉಪನ್ಯಾಸಗಳು, ಕುರಾನ್ ಪಾಠ, ನೈತಿಕ ಮೌಲ್ಯಗಳ ಕುರಿತು ಬೋಧನೆ, ಯುವಕರಿಗಾಗಿ ವಿಶೇಷ ಪ್ರೇರಣಾ ಸತ್ರಗಳು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಇವಾರ್ತೆ ಗೆ ತಿಳಿಸಿದ್ದಾರೆ


