ಹಯಾತುಲ್ ಇಸ್ಲಾಂ ಕಮಿಟಿ ರಿ .ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ಪೇರೆಂಟ್ಸ್ ಮೀಟ್ ಹಾಗೂ ಸನ್ಮಾನ ಸಮಾರಂಭವು ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಿ ಎಂ ರವರ ಅಧ್ಯಕ್ಷತೆಯಲ್ಲಿ ನವಂಬರ್ 22 ಶನಿವಾರ ಇಂದು ಸಂಜೆ 4.30 ಕ್ಕೆ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.

ಎಸ್ ಜೆ ಎಂ ರಾಜ್ಯ ಮಟ್ಟದ ಮುಅಲ್ಲಿಂ ಅವಾರ್ಡ್ ಪಡೆದ,ಮುಅಲ್ಲಿಂ ಮೆಹರ್ಜಾನ್ ಮದ್ರಸ ಅಧ್ಯಾಪಕರ ಸ್ಪರ್ಧೆಯಲ್ಲಿ ರೇಂಜ್ ಮಟ್ಟದ ಹೈ ಝೋನ್ ವಿಭಾಗದ ಕಲಾ ಪ್ರತಿಭೆಯಾಗಿ ಹೊರಹೊಮ್ಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ,ಜಿಲ್ಲಾ ಮಟ್ಟದಿಂದ ರಾಜ್ಯಕ್ಕೆ ಆಯ್ಕೆಯಾಗಿ,ಇದೀಗ ರಾಜ್ಯ ಹೈ ಝೋನ್ ವಿಭಾಗ ಮಲಯಾಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಊರಿನ ಕೀರ್ತಿಗೆ ಕಾರಣರಾದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವನ್ನು ಹಯಾತುಲ್ ಇಸ್ಲಾಂ ಕಮಿಟಿ ಹಾಗೂ ಊರ ರವರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಕಾರ್ಯಕ್ರಮದಲ್ಲಿ ರಕ್ಷಕ ಪೋಷಕರು,ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ವಿನಂತಿಸಿರುತ್ತಾರೆ.







m
