Featured, ಇತರೆ, ಸ್ಥಳೀಯ

ಪುದು : ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್: ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ  :  ಪುದು ಇಲ್ಲಿನ ಕರ್ನಾಟಕ ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್ ಇದರ 2025-26 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಶನಿವಾರ ನಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ  ರಮ್ಲಾನ್ ಮಾರಿಪಳ್ಳ  ಮಾತನಾಡಿ, ಶಿಕ್ಷಣದ ಜೊತೆ ಕ್ರೀಡೆಯನ್ನು ಮೈಗೂಡಿಸಿಕೊಂಡಾಗ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

 

ಶಾಲಾ ಪ್ರಾಂಶುಪಾಲ   ಮಹಮ್ಮದ್ ಫಾರೂಕ್ , ಕಚೇರಿ ಸಹಾಯಕ ಅಬ್ದುಲ್ ಮಜೀದ್,   ಸುಜೀರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕನಾಯ್ಕ್ , ದೈಹಿಕ ಶಿಕ್ಷಕ ಇಮ್ತಿಯಾಜ್, ಶಾಲಾ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.

  ರಬೀಅತ್ತುಲ್ ಅದ್ ವಿಯ   ಸ್ವಾಗತಿಸಿ, ಅಲ್ ನಿಧಾ ಫಾತಿಮಾ ವಂದಿಸಿದರು. ಹಲೀಮತ್ ರಶೀದ, ಪುನೀತ ಮತ್ತು ರಝೀಯ ಎಸ್.ಪಿ. ವಿವಿಧ ಕಾರ್ಯಕ್ರಮ ನಿರೂಪಿಸಿದರು.

Related Posts