ಇತರೆ, ಸ್ಥಳೀಯ

ಕಗ್ಗತ್ತಲಲ್ಲಿ ನಿಂತಿಕಲ್ಲು! : ರಾತ್ರಿ ಬಂದರೆ ಬೆಳಕಿಲ್ಲ… ಭರವಸೆಯಲ್ಲೇ ಜೀವಿಸುವ ಜನ! — ಹೈಮಾಸ್ಟ್ ದೀಪಕ್ಕೆ ನಾಗರಿಕರ ಬೇಡಿಕೆ.

ನಿಂತಿಕಲ್ಲು: ನಾಲ್ಕು ಗ್ರಾಮಗಳ ಕೇಂದ್ರ ಸ್ಥಾನವಾಗಿರುವ ನಿಂತಿಕಲ್ಲು ಪೇಟೆಯಲ್ಲಿ ರಾತ್ರಿ ಹೊತ್ತಿಗೆ ಸಾರ್ವಜನಿಕ ದಾರಿದೀಪಗಳ ಕೊರತೆಯಿಂದ ಕಗ್ಗತ್ತಲು ಆವರಿಸುತ್ತದೆ. ದಾರಿದೀಪಗಳಿಲ್ಲದೆ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಮೂರು–ನಾಲ್ಕು ಗ್ರಾಮಗಳನ್ನು ಒಳಗೊಂಡಿರುವ ನಿಂತಿಕಲ್ಲು ಪೇಟೆ ವ್ಯಾಪಾರಿಕವಾಗಿ ಬೆಳೆಯುತ್ತಿದ್ದರೂ, ದಾರಿದೀಪ ವ್ಯವಸ್ಥೆ ಇನ್ನೂ ಕಲ್ಪನೆಯಲ್ಲೇ ಉಳಿದಿದೆ. ಅಭಿವೃದ್ಧಿ ಕಾರ್ಯಗಳ ವಿಚಾರ ಬಂದಾಗ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೀನ–ಮೇಷ ನೋಡುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಬಾರಿ ಶಾಸಕಿ ಸ್ಥಳೀಯರೇ ಆಗಿರುವುದರಿಂದ, ಕನಿಷ್ಠ ನಿಂತಿಕ್ಕಲ್ ಪೇಟೆಗೆ ಒಂದು ದೊಡ್ಡ ಹೈಮಾಸ್ಟ್ ದೀಪವಾದರೂ ಅಳವಡಿಸಲಾಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ನಾಗರಿಕರು ಕಾದು ಕುಳಿತಿದ್ದಾರೆ. ಬೆಳಕು ಬರುವುದೋ, ಮತ್ತೆ ಕತ್ತಲೇ ಮುಂದುವರಿಯುವುದೋ ಎಂಬುದು ಕಾಲವೇ ಹೇಳಬೇಕಿದೆ.

Related Posts