ಪ್ರಕೃತಿ ವಿಕೋಪದಿಂದ ಜನಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುವಲ್ಲಿ ಶಾಸಕಿ ಭಾಗೀರಥಿ ಮುರುಳ್ಯರು ವಹಿಸಿದ ಪಾತ್ರ ಪ್ರಶಂಸನೀಯವಾಗಿದೆ
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ 21 ಕಾಮಗಾರಿಗಳ ಪುನಶ್ಚೇತನಕ್ಕೆ ಶಾಸಕಿ ಭಾಗೀರಥಿ ಮುರುಳ್ಯರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ ನಿಧಿ (SDMF) ಯಿಂದ ಒಟ್ಟು ₹1082 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಕ್ಷೇತ್ರದ ಜನರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿದ ಶಾಸಕಿ ಭಾಗೀರಥಿ ಮುರುಳ್ಯರ ಸಕ್ರಿಯ ಪ್ರಯತ್ನದಿಂದ ಈ ಅನುದಾನ ಮಂಜೂರಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿದೆ.
ವಿಶೇಷವಾಗಿ ನೆಲ್ಯಾಡಿ ಗ್ರಾಮದ ಬೈಲು–ಕುತ್ಯಾಡಿ ಸೇತುವೆ ಮರುನಿರ್ಮಾಣಕ್ಕೆ ₹60 ಲಕ್ಷ ಹಾಗೂ ಆಲಂಕಾರು ಗ್ರಾಮದ ಕಕ್ವೆ ರಸ್ತೆ ಪುನರ್ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಒದಗಿಸಲಾಗಿದೆ. ಇದರೊಂದಿಗೆ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾನಿಗೊಳಗಾದ ರಸ್ತೆ, ಸೇತುವೆಗಳು ಹಾಗೂ ತಡೆಗೊಡೆಗಳ ನಿರ್ಮಾಣ ಮತ್ತು ಮರುಸಂಸ್ಕರಣೆಗೆ ಅಗತ್ಯ ನಿಧಿ ಬಿಡುಗಡೆಗೊಂಡಿದೆ.
ಪ್ರಕೃತಿ ವಿಕೋಪದಿಂದ ಜನಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುವಲ್ಲಿ ಶಾಸಕಿ ಭಾಗೀರಥಿ ಮುರುಳ್ಯರು ವಹಿಸಿದ ಪಾತ್ರ ಪ್ರಶಂಸನೀಯವಾಗಿದೆ. ಈ ಅನುದಾನದಿಂದ ಸಾರ್ವಜನಿಕ ಮೂಲಸೌಕರ್ಯಗಳ ಪುನಶ್ಚೇತನ ಸಾಧ್ಯವಾಗಲಿದ್ದು, ಸ್ಥಳೀಯ ಜನತೆಗೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಮಹತ್ವದ ಸಹಾಯವಾಗಲಿದೆ.




