Featured, ಆರೋಗ್ಯ, ಇತರೆ, ಕ್ರೀಡೆ, ಸ್ಥಳೀಯ

ಅಂತರ್‌ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ನೆಟ್ಟಾರು ಗಮನಾರ್ಹ ಸಾಧನೆ

ಮಂಗಳೂರು, ಡಿ.14:
ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಡಿಸೆಂಬರ್ 14ರಂದು ನಡೆದ ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಾಸ್ಟರ್ಸ್ ಅಂತರ್‌ಜಿಲ್ಲಾ ಮಟ್ಟದ ಕ್ರೀಡಾಕೂಟದ ಎತ್ತರ ಜಿಗಿತ ಹಾಗೂ 400 ಮತ್ತು 800 ಮೀಟರ್ ಓಟದ ಸ್ಪರ್ಧೆಯಲ್ಲಿ ಫ್ರೆಂಡ್ಸ್ ಕ್ಲಬ್ ನೆಟ್ಟಾರು ಸದಸ್ಯ ಚಂದ್ರಶೇಖರ್ ನೆಟ್ಟಾರು ಅವರು ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಈ ಸಾಧನೆಯೊಂದಿಗೆ ಚಂದ್ರಶೇಖರ್ ನೆಟ್ಟಾರು ಅವರು ಕೋಲಾರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಫ್ರೆಂಡ್ಸ್ ಕ್ಲಬ್ ನೆಟ್ಟಾರು ಇದರ ಸಕ್ರಿಯ ಸದಸ್ಯರಾಗಿದ್ದು, ಅವರ ಈ ಸಾಧನೆಗೆ ಕ್ಲಬ್ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Related Posts