Featured, ಇತರೆ, ಸ್ಥಳೀಯ

ಅರಂತೋಡು ವಾಹನ ಚಾಲಕ – ಮಾಲಕ ಸಂಘದವರಿಂದ ನಿವೇಶನಕ್ಕಾಗಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಮನವಿ

ಅರಂತೋಡಿನಲ್ಲಿ ಕಳೆದ ಸುಮಾರು 30–40 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕ–ಮಾಲಕ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಅರಂತೋಡು ವ್ಯಾಪ್ತಿಯಲ್ಲಿ ನಿವೇಶನವನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಡಿ.19ರಂದು ನಡೆದ ಈ ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಸನ್ನ (ರಾಜ) ಅಜ್ಜನಗದ್ದೆ ಹಾಗೂ ಕಾರ್ಯದರ್ಶಿ ಗೋವರ್ಧನ ಇರ್ಣೆ ಉಪಸ್ಥಿತರಿದ್ದು, ಸಂಘದ ಚಟುವಟಿಕೆಗಳು ಹಾಗೂ ಕಟ್ಟಡದ ಅಗತ್ಯತೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಯತೀಶ ಕಟ್ಟಕೊಡಿ, ಅಂಬುಜಾಕ್ಷ ಮತ್ತಿತರರು ಹಾಜರಿದ್ದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಟಿ.ಎಂ. ಶಹೀದ್ ತೆಕ್ಕಿಲ್ ಅವರು, ಸಂಘಕ್ಕೆ ಅಗತ್ಯವಾದ ನಿವೇಶನವನ್ನು ದೊರಕಿಸಿಕೊಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Related Posts