Featured, ಇತರೆ, ಸ್ಥಳೀಯ

ಕುಂಭಕ್ಕೋಡು ವಲಿಯತ್ತುಲ್ಲಾಹಿ ಮಣವಾಟಿ ಬೀವಿ ಮಖಾಂ ಶರೀಫ್ ಉರೂಸ್‌ಗೆ ಇಂದು ಚಾಲನೆ — ಪ್ರಥಮ ದಿನದ ಧಾರ್ಮಿಕ ಕಾರ್ಯಕ್ರಮಗಳ ವಿವರ

ಸುಳ್ಯ: ಇತಿಹಾಸ ಪ್ರಸಿದ್ಧ ಕುಂಭಕ್ಕೋಡು ಮಣವಾಟಿ ಬೀವಿ ಮಖಾಂ ಶರೀಫ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಧಾರ್ಮಿಕ ಉರೂಸ್ ಕಾರ್ಯಕ್ರಮವು ಇಂದಿನಿಂದ ಆರಂಭಗೊಳ್ಳಲಿದೆ.

ಇಂದು ಬೆಳಿಗ್ಗೆ 9.30 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಉರೂಸ್ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಕೊಯಂಗಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಜುಮಾ ನಮಾಝಿನ ಬಳಿಕ ಬಹು. ಅಸ್ಸಯ್ಯಿದ್ ಉಮರ್ ಜೆಫ್ರಿ ಆಲ್ ಹನೀಫಿ ತಂಙಳ್ ಅವರ ನೇತೃತ್ವದಲ್ಲಿ ಖತ್ಮುಲ್ ಕುರ್‌ಆನ್ ಹಾಗೂ ಪಳ್ಳಿನೆರ್ಚೆ ಮೌಲಿದ್ ಪಾರಾಯಣ ನಡೆಯಲಿದೆ.

ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಹು. ಅಸ್ಸಯ್ಯಿದ್ ಕುಂಞಕೋಯ ತಂಙಳ್ ಸಅದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಮಹಮ್ಮದ್ ಇರ್ಷಾದ್ ಅಝ್ಹರಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಎಂದು ಸಂಘಟಕರು ತಿಳಿಸಿದ್ದಾರೆ

Related Posts