ಸುಳ್ಯ ಗಾಂಧಿನಗರದ ಗಾಂಧಿ ಪಾರ್ಕ್ ಸಮೀಪ MLC ಮಂಜುನಾಥ ಭಂಡಾರಿ ಅವರ ಅನುದಾನ ಹಾಗೂ ಮಾಜಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಅವರ ಮುತುವರ್ಜಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ನೂತನ ಆಟೋಸ್ಟ್ಯಾಂಡ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ವಾರದೊಳಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಇದರೊಂದಿಗೆ ಗಾಂಧಿನಗರದ ಸಂಚಾರ ವ್ಯವಸ್ಥೆಗೆ ಮಹತ್ವದ ಸುವ್ಯವಸ್ಥೆ ದೊರೆಯಲಿದೆ.

ಸುಳ್ಯ ಗಾಂಧಿನಗರದ ಗಾಂಧಿ ಪಾರ್ಕ್ ಸಮೀಪ, ವಿಧಾನ ಪರಿಷತ್ ಸದಸ್ಯ (MLC) ಮಂಜುನಾಥ ಭಂಡಾರಿ ಅವರ ಅನುದಾನ ಹಾಗೂ ಮಾಜಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಅವರ ಮುತುವರ್ಜಿಯಿಂದ ಸುಸಜ್ಜಿತ ನೂತನ ರಿಕ್ಷಾ ನಿಲ್ದಾಣ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ವೇಗವಾಗಿ ಪ್ರಗತಿಯಲ್ಲಿದೆ.
ಈವರೆಗೆ ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯಿಂದ ಸಮಸ್ಯೆ ಎದುರಿಸುತ್ತಿದ್ದ ಸ್ಥಳದಲ್ಲಿ ಇದೀಗ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯಗಳೊಂದಿಗೆ ಆಧುನಿಕ ಆಟೋಸ್ಟ್ಯಾಂಡ್ ನಿರ್ಮಾಣವಾಗುತ್ತಿದೆ. ಪ್ರಯಾಣಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವಂತೆ ರೂಪಿಸಲಾಗಿರುವ ಈ ನಿಲ್ದಾಣದ ಕಾಮಗಾರಿ ಇದೀಗ ಅಂತಿಮ ಹಂತದತ್ತ ಸಾಗುತ್ತಿದೆ.
ನೂತನ ಆಟೋಸ್ಟ್ಯಾಂಡ್ ವಾರದೊಳಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಮಾಜಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ತಿಳಿಸಿದ್ದಾರೆ. ಆಟೋಸ್ಟ್ಯಾಂಡ್ ಕಾರ್ಯಾರಂಭಗೊಂಡ ಬಳಿಕ ಗಾಂಧಿನಗರ ಪ್ರದೇಶದ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಸುವ್ಯವಸ್ಥೆ ದೊರೆಯಲಿದೆ ಎಂಬ ವಿಶ್ವಾಸವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

