ಬೆಳ್ತಂಗಡಿ (ಜ.04):
ಸಂಜಯ್ ಗ್ಲೋಬಲ್ ಫೌಂಡೇಶನ್, ಬೆಳ್ತಂಗಡಿ ಇದರ ಪ್ರಾಯೋಜಕತ್ವದಲ್ಲಿ, ಹಯಾತುಲ್ ಇಸ್ಲಾಂ ಮದರಸ – ಬೆಳ್ತಂಗಡಿ ಹಾಗೂ ವೆನ್ ಲಾಕ್ ಸರಕಾರಿ ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಮರ್ಹೂಂ ಶಾಝಿನ್ (ಸಲೀಂ ಮುರ ಅವರ ಪುತ್ರ) ಅವರ ಸ್ಮರಣಾರ್ಥ ರಕ್ತದಾನ ಶಿಬಿರವು ಖಿಳರ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು. ಶಿಬಿರವು ಫೌಂಡೇಶನ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅಕ್ಬರ್ ಬೆಳ್ತಂಗಡಿ, ರಕ್ತದಾನವು ಮಾನವೀಯ ಸೇವೆಯ ಅತ್ಯುತ್ತಮ ರೂಪವಾಗಿದ್ದು, ಪ್ರತಿಯೊಬ್ಬರೂ ಈ ಸೇವೆಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ವೆನ್ ಲಾಕ್ ಸರಕಾರಿ ಆಸ್ಪತ್ರೆ, ಮಂಗಳೂರು ಇದರ ಬ್ಲಡ್ ಬ್ಯಾಂಕ್ ಅಧಿಕಾರಿ ಆಂಟೋನಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಅಧ್ಯಕ್ಷ ಬಿ. ಶೇಕುಂಞ್ಞ ಅತಿಥಿ ಭಾಷಣ ಮಾಡಿ, ರಕ್ತದಾನದ ಅವಶ್ಯಕತೆ ಮತ್ತು ಸಮಾಜಕ್ಕೆ ಅದರ ಮಹತ್ವವನ್ನು ವಿವರಿಸಿದರು.
ಮುಹಿಯುದ್ದೀನ್ ಜುಮ್ಮಾ ಮಸೀದಿ ಮುರ–ನಾವೂರು ಇದರ ಪ್ರಧಾನ ಕಾರ್ಯದರ್ಶಿ ಖಾದರ್ ನಾವೂರು ಮಾತನಾಡಿ, ರಕ್ತದಾನದ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಖಿಳರ್ ಜುಮ್ಮಾ ಮಸೀದಿ ಖತೀಬರಾದ ಹನೀಫ್ ಫೈಝಿ, ಮುಹಿಯುದ್ದೀನ್ ಜುಮ್ಮಾ ಮಸೀದಿ ಮುರ–ನಾವೂರು ಖತೀಬರಾದ ಬಶೀರ್ ಸಅದಿ ಕೆಮ್ಮಾರ, ಬೆಳ್ತಂಗಡಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್, ಖಿಳರ್ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಗಾಳದ ರಝಾಕ್ ಕೋಡಿಸಭೆ, ಸಲೀಂ ಮುರ, ಹನೀಫ್ ವರ್ಷಾ, ಇಸ್ಮಾಯಿಲ್ ಐ.ಬಿ., ಮಹಮ್ಮದ್ ಕುದ್ರಡ್ಕ, ಅಬ್ಬಾಸ್ ಸಂಜಯನಗರ, ರಿಜ್ವಾನ್ ಬಿ.ಕೆ., ರಶೀದ್ ಬೆಳ್ತಂಗಡಿ, ರಿಯಾಝ್ ಸಂಜಯನಗರ, ಶೈರೋಝ್ ಉದಯನಗರ ಸೇರಿದಂತೆ ಊರಿನ ಅನೇಕ ನಾಗರಿಕರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು 53 ಯುನಿಟ್ ರಕ್ತವನ್ನು ಯಶಸ್ವಿಯಾಗಿ ಸಂಗ್ರಹಿಸಲಾಯಿತು.
ಶಬೀರ್ ಸಂಜಯನಗರ ಕಾರ್ಯಕ್ರಮವನ್ನು ನಿರೂಪಿಸಿದರು.

