Featured, ಇತರೆ, ಸ್ಥಳೀಯ

ಸುಳ್ಯ: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ, ಅಮೃತ ಭವನದ ಶಿಲ್ಪಿ, ಕಮಲಾಕ್ಷಿ ವಿ. ಶೆಟ್ಟಿ ನಿಧನ

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೋರಿದ ಸಕ್ರಿಯ ಪಾತ್ರ ಹಾಗೂ ಸಂಘಟನೆಗಳಲ್ಲಿ ನೀಡಿದ ನಾಯಕತ್ವಕ್ಕಾಗಿ ಕಮಲಾಕ್ಷಿ ವಿ. ಶೆಟ್ಟಿ ಅವರು ಸಮಾಜದ ವಿವಿಧ ವಲಯಗಳಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನದಿಂದ ಸುಳ್ಯ ತಾಲೂಕು ಒಂದು ಆದರ್ಶ ಶಿಕ್ಷಕಿಯನ್ನು ಹಾಗೂ ಸಮಾಜಸೇವಿಕೆಯನ್ನು ಕಳೆದುಕೊಂಡಂತಾಗಿದೆ.

ಸುಳ್ಯ: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಬಂಟರ ಸಂಘದ ಮಹಿಳಾ ಘಟಕದ ಗೌರವಾಧ್ಯಕ್ಷೆ, ಸುಳ್ಯ ಅಮೃತ ಭವನದ ಶಿಲ್ಪಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.

ಕೆಲ ಸಮಯದಿಂದ ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ಕಮಲಾಕ್ಷಿ ಟೀಚರ್ ಅವರು ಚೆನ್ನಕೇಶವ ದೇವಸ್ಥಾನದ ಸಮೀಪದ ತಮ್ಮ ನಿವಾಸದಲ್ಲಿದ್ದರು. ನಿನ್ನೆ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ವಿಧಿವಶರಾದರು.
ಅವರ ಅಂತಿಮ ದರ್ಶನವು ಇಂದು ಸಾಯಂಕಾಲ 3 ಗಂಟೆಯಿಂದ 4 ಗಂಟೆಯವರೆಗೆ ಚೆನ್ನಕೇಶವ ದೇವಸ್ಥಾನದ ಬಳಿ ಇರುವ ಅವರ ಸ್ವಗೃಹದಲ್ಲಿ ನಡೆಯಲಿದೆ. ಬಳಿಕ ಅವರ ಅಂತ್ಯಕ್ರಿಯೆ ಕೊಡಿಯಾಲ ಬೈಲಿನ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

 

Related Posts