Featured, ಇತರೆ, ಸ್ಥಳೀಯ

ಗುತ್ತಿಗಾರು ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಶಾಲಾ ಕೊಠಡಿ ಗುದ್ದಲಿಪೂಜೆ

ಪಿ.ಎಂ.ಶ್ರೀ ಅನುದಾನದಲ್ಲಿ ₹17 ಲಕ್ಷ ವೆಚ್ಚದ ಕೊಠಡಿ ನಿರ್ಮಾಣ ಆರಂಭ – ಶಾಸಕರ ಅನುದಾನದಿಂದ ನಿರ್ಮಿತ ಶೌಚಾಲಯ ಮತ್ತು ಬೋರ್‌ವೆಲ್ ಉದ್ಘಾಟನೆ 

ಸುಳ್ಯ ತಾಲೂಕಿನ ಗುತ್ತಿಗಾರು ಪಿ.ಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಪಿ.ಎಂ. ಶ್ರೀ ಅನುದಾನದಿಂದ 17ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಶಾಲ ಕೊಠಡಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು ಮತ್ತು ಶಾಸಕರ ಅನುದಾನದಿಂದ ನಿರ್ಮಾಣವಾದ ಶೌಚಾಲಯ ಮತ್ತು ನೂತನ ಬೊರ್ ವೇಲ್ ಅನ್ನು ಉದ್ಘಾಟಿಸಿ ಶುಭಹಾರೈಸಲಾಯಿತು. ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ಶಾಲ SDMC ಅಧ್ಯಕ್ಷ ವೆಂಕಟ್ ದಂಬೆಕೋಡಿ,ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ,ಸದಸ್ಯರಾದ ಜಗದೀಶ್, ಪ್ರಮುಖರಾದ ಮಾಜಿ ತಾ.ಪಂಚಾಯತ್ ಅಧ್ಯಕ್ಷ ಮುಳಿಯ ಕೇಶವ ಭಟ್,ಕೃಷ್ಣಯ್ಯ ಮೂಲೆತೋಟ ಸಹಿತ ಹಲವಾರು ಪ್ರಮುಖರು,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು,ಶಾಲಾ ಶಿಕ್ಷಕವೃಂದ‌ ಮತ್ತು ಮಕ್ಕಳು ಉಪಸ್ಥಿತರಿದ್ದರು.

♦

Related Posts