ಸುಳ್ಯ ನಗರದ ಬೊರುಗುಡ್ಡೆ, ಜಟ್ಟಿಪಳ್ಳ, ಕನಿಕರಪಳ್ಳ, ಬೊಳಿಯಮಜಲು, ಕೊಡಿಯಾಲ್ ಬೈಲು ಹಾಗೂ ಅಮೈ ಪರಿಸರದ ಹಲವು ಭಾಗಗಳಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಹೊಸ ನಳ್ಳಿ ನೀರು ಸರಬರಾಜಿನ ಟ್ರಯಲ್ ಇಂದು ನಡೆಯಲಿದೆ.

ಸುಳ್ಯ ನಗರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ಜಲ್ ಜೀವನ್ ಮಿಷನ್ – ಹರ್ ಘರ್ ಜಲ್’ ಯೋಜನೆಯು ಪ್ರತಿ ಮನೆಗೂ ವೈಯಕ್ತಿಕ ನಲ್ಲಿ ಸಂಪರ್ಕದ ಮೂಲಕ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿ ಈ ಯೋಜನೆಯನ್ನು ‘ಮನೆ ಮನೆಗೆ ಗಂಗೆ’ ಎಂಬ ಹೆಸರಿನಡಿ ಜಾರಿಗೊಳಿಸಲಾಗುತ್ತಿದೆ.
ಸುಳ್ಯ ನಗರದಲ್ಲಿ ಈ ಯೋಜನೆಯ ಅನುಷ್ಠಾನದ ವೇಳೆ ಕೆಲವೊಂದು ತಾಂತ್ರಿಕ ಹಾಗೂ ಸ್ಥಳೀಯ ಸಮಸ್ಯೆಗಳು ಎದುರಾದರೂ,ರಸ್ತೆಗಳ ಅಗೆತ ಹಾಗೂ ಪೈಪ್‌ಲೈನ್ ಅಳವಡಿಕೆಯ ವೇಳೆ ಸಾರ್ವಜನಿಕರಿಗೆ ತೊಂದರೆಗಳಾಗಿದ್ದರೂ,
ಜನರ ಸಹಕಾರ ಮತ್ತು ಅಧಿಕಾರಿಗಳ ಸಕ್ರಿಯ ಪ್ರಯತ್ನದಿಂದ ಯೋಜನೆ ಇದೀಗ ಅಂತಿಮ ಹಂತವನ್ನು ತಲುಪಿದೆ.
ಇದೀಗ ಸುಳ್ಯ ನಗರದ ಬೊರುಗುಡ್ಡೆ, ಜಟ್ಟಿಪಳ್ಳ, ಕನಿಕರಪಳ್ಳ, ಬೊಳಿಯಮಜಲು, ಕೊಡಿಯಾಲ್ ಬೈಲು ಹಾಗೂ ಅಮೈ ಪರಿಸರದ ಹಲವು ಭಾಗಗಳಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಹೊಸ ನಳ್ಳಿ ನೀರು ಸರಬರಾಜಿನ ಟ್ರಯಲ್ ಇಂದು ನಡೆಯಲಿದೆ. ಈ ಟ್ರಯಲ್ ಯಶಸ್ವಿಯಾದ ಬಳಿಕ ಒಂದು ವಾರದ ಬಳಿಕ ಶಾಶ್ವತವಾಗಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಆರಂಭವಾಗಲಿದೆ.ಎಂದು ನಗರ ಪಂಚಾಯತ್ ಮಾಜಿ ಸದಸ್ಯ ಕೆ ಎಸ್ ಉಮ್ಮರ್ ತಿಳಿಸಿದ್ದಾರೆ
ಈ ಯೋಜನೆಯಿಂದಾಗಿ ಸುಳ್ಯ ನಗರದ ನಿವಾಸಿಗಳಿಗೆ ನಿರಂತರ, ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಲಭ್ಯವಾಗಲಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಜೀವನಮಟ್ಟದಲ್ಲಿ ಮಹತ್ತರ ಸುಧಾರಣೆ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

