ಸುಳ್ಯ: ಪ್ರಸಿದ್ಧ ಇಸ್ಲಾಮಿಕ್ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರು ಇಂದು ಸುಳ್ಯದ ಎಜುಕೇಷನಲ್ ಸರ್ವೀಸಸ್ ಎನ್‍ಲೈಟ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಅವರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದ ನಡೆಸಿ, ವಿದ್ಯಾಭ್ಯಾಸದ ಮಹತ್ವ, ಶಿಸ್ತು ಹಾಗೂ ನೈತಿಕ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಅದಮ್ ಹಾಜಿ ಕಮ್ಮಾಡಿ, ಹಮೀದ್ ಕುತ್ತಮೊಟ್ಟೆ, ಪಿ ಎ ಮಹಮ್ಮದ್, ನಿಸಾರ್ ಅರಂಬೂರು ಶಹೀದ್ ಪಾರೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

