Featured, ಆರೋಗ್ಯ, ಸ್ಥಳೀಯ

CET-2026 ಆನ್‌ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

22 ಫೆಬ್ರವರಿ ತನಕ ನೋಂದಣಿ ಅವಕಾಶ – 24ರವರೆಗೆ ಶುಲ್ಕ ಪಾವತಿ ಸೌಲಭ್ಯ

ಬೆಂಗಳೂರು, ಫೆ.14: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)  ವತಿಯಿಂದ ನಡೆಯಲಿರುವ CET-2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ.

ಏಪ್ರಿಲ್ 23 ಮತ್ತು 24, 2026ರಂದು ನಡೆಯಲಿರುವ CET-2026 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮೂಲ ಕೊನೆಯ ದಿನಾಂಕ ಫೆಬ್ರವರಿ 16 ಹಾಗೂ ಶುಲ್ಕ ಪಾವತಿ ದಿನಾಂಕ ಫೆಬ್ರವರಿ 18 ಆಗಿತ್ತು. ಆದರೆ ಇನ್ನೂ ಅರ್ಜಿ ಸಲ್ಲಿಸದ ಹಾಗೂ ಶುಲ್ಕ ಪಾವತಿಸದ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೋಂದಣಿ ಹಾಗೂ ಅರ್ಜಿ ಸಲ್ಲಿಕೆ ದಿನಾಂಕವನ್ನು ಫೆಬ್ರವರಿ 22ರ ರಾತ್ರಿ 11.59ರವರೆಗೆ ವಿಸ್ತರಿಸಲಾಗಿದೆ.
ಇದೇ ವೇಳೆ ಶುಲ್ಕ ಪಾವತಿಸಲು ಫೆಬ್ರವರಿ 24ರ ಸಂಜೆ 5.30ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದುವರೆಗೆ 2,87,909 ಅಭ್ಯರ್ಥಿಗಳು CET-2026ಕ್ಕೆ ನೋಂದಾಯಿಸಿಕೊಂಡಿದ್ದಾರೆ ಎಂದು KEA ಮಾಹಿತಿ ನೀಡಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಮಾಹಿತಿಯನ್ನು ಲಾಗಿನ್ ಮೂಲಕ ಪರಿಶೀಲಿಸಿ, ತಪ್ಪಿದ್ದರೆ ತಿದ್ದುಪಡಿ ಮಾಡಿಕೊಳ್ಳಬೇಕು. ಅಂತಿಮವಾಗಿ ‘Submit’ ಮಾಡಿದ ನಂತರದ ವಿವರಗಳು ಸರ್ವರ್‌ನಲ್ಲಿ ಸಂರಕ್ಷಿತವಾಗುತ್ತವೆ ಎಂದು ವಿಶೇಷ ಸೂಚನೆಯಲ್ಲಿ ತಿಳಿಸಲಾಗಿದೆ.

Related Posts