Featured, ಇತರೆ, ಸ್ಥಳೀಯ

ಪೆರುವಾಜೆ ದೇವಸ್ಥಾನ : ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರ

ನಾಲ್ವರು ಸದಸ್ಯರಿಂದ  ಆಡಳಿತಾಧಿಕಾರಿಯವರಿಗೆ ಆಕ್ಷೇಪ ಸಲ್ಲಿಕೆ

ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆಯ ಸಂದರ್ಭ ಕೆಲವು ಸದಸ್ಯರು ಸಭೆಯಲ್ಲಿ ಭಾಗವಹಿಸದಂತೆ ಮಾಡಿ ಆಯ್ಕೆ ನಡೆಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ ” ಎಂದು ವ್ಯವಸ್ಥಾಪನ ಸಮಿತಿಯ ನಾಲ್ವರು ಸದಸ್ಯರು ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಗ್ರಾ.ಪಂ. ಪಿ.ಡಿ.ಒ.ಗೆ ಅಕ್ಷೇಪಣಾ ಪತ್ರ ನೀಡಿದ್ದಾರೆ.
ಇಂದು ಬೆಳಿಗ್ಗೆ 9.30 ಕ್ಕೆ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಸಮಿತಿಯ ಸಭೆಯನ್ನು ನೀವು ಕರೆದಿದ್ದಿರಿ. ನಾವು ನಾಲ್ಕು ಮಂದಿ ಸಮಯಕ್ಕೆ ಸರಿಯಾಗಿ  ಆಡಳಿತ ಕಚೇರಿಗೆ ಬಂದಿದ್ದೆವು. ಆದರೆ ನೀವು ನಮಗೆ ತಿಳಿಸದೆ ಬೇರೆ ಕಡೆ ಯಾತ್ರಿನಿವಾಸದಲ್ಲಿ ಸಭೆ ನಡೆಸಿದ್ದೀರಿ. ಪ್ರಧಾನ ಅರ್ಚಕ ಎಂಬ ಹೆಸರಲ್ಲಿ ಶ್ರೀನಿವಾಸ್ ಹೆಬ್ಬಾರ್ ಮತಚಲಾಯಿಸಿದ್ದು, ಅವರು ಹಿಂದೆ ಅರ್ಚಕ ವೃತ್ತಿ ತೊರೆದವರು. ಆದ್ದರಿಂದ ಇವತ್ತು ಮಾಡಿರುವ ಆಯ್ಕೆಯನ್ನು ರದ್ದುಗೊಳಿಸಿ ಹೊಸದಾಗಿ ಅಧ್ಯಕ್ಷರ ಆಯ್ಕೆಗೆ ಕ್ತಮಕೈಗೊಳ್ಳಬೇಕು ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಅಜಯ್ ಶೆಟ್ಟಿ, ಕಿಶೋರ್ ಕುಮಾರ್, ನಿರ್ಮಲಾ ರೈ ಮತ್ತು ಸುಂದರಿಯವರು ಸಹಿ ಹಾಕಿ ಆಕ್ಷೇಪಣೆ ನೀಡಿದ್ದಾರೆ.

Related Posts