ಸುಳ್ಯದ ಅಭಿವೃದ್ಧಿಯಲ್ಲಿ ಡೆಲ್ಮಾ ಗ್ರೂಪ್ಸ್‌ನ ಕೊಡುಗೆ ಅಪಾರ: ಕೆ. ಎಂ. ಮುಸ್ತಫ
ಸುಳ್ಯ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಾಲ್ಕು ದಶಕಗಳ ಉದ್ಯಮ ಅನುಭವ ಹೊಂದಿರುವ ಸುಳ್ಯ ಮೂಲದ Delma Groups ಸಂಸ್ಥೆಯ ಓಲ್ಡ್ ಟೌನ್ ಸೂಪರ್ ಮಾರ್ಕೆಟ್‌ನ್ನು ಸುಳ್ಯ ಗಾಂಧಿನಗರದ ಯೂನಿಯನ್ ಬ್ಯಾಂಕ್ ಸಮೀಪದ ಡೆಲ್ಮಾ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟಿಸಲಾಯಿತು.

ಸೂಪರ್ ಮಾರ್ಕೆಟ್‌ನ್ನು ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ ಉದ್ಘಾಟಿಸಿ ಮಾತನಾಡಿ, ಸುಳ್ಯದ ಅಭಿವೃದ್ಧಿಯಲ್ಲಿ ಡೆಲ್ಮಾ ಗ್ರೂಪ್ಸ್‌ನ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಸಂಸ್ಥೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಅವರು ಪ್ರಥಮ ಗ್ರಾಹಕರಾದ ಕೃಷ್ಣ ಲೈಟಿಂಗ್ಸ್ ಮಾಲಕರಿಗೆ ಉತ್ಪನ್ನಗಳನ್ನು ವಿತರಿಸುವ ಮೂಲಕ ಮಾರಾಟಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಟಿ. ಎಂ. ಶಹೀದ್ ಅವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ. ಬಿ. ಸುಧಾಕರ್ ರೈ, ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್‌ನ ನಿಕಟ ಪೂರ್ವ ಸದಸ್ಯರಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಬೂಡು ಭಗವತಿ ಕ್ಷೇತ್ರ ಸಮಿತಿ ಸದಸ್ಯ ಸುನಿಲ್ ಕೇರ್ಪಳ, ಉದ್ಯಮಿಗಳಾದ ಎಸ್. ಪಿ. ಅಬೂಬಕ್ಕರ್, ಸೀ ಫುಡ್ ಇಬ್ರಾಹಿಂ ಹಾಜಿ, ಹಾಜಿ ಎನ್. ಎಂ. ಅಬ್ದುಲ್ ರೆಹ್ಮಾನ್ ಕಯ್ಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಶುಹೈಲ್ ಸ್ವಾಗತಿಸಿ, ಇನ್ನೋರ್ವ ಪಾಲುದಾರ ನವಾಜ್ ವಂದಿಸಿದರು. ಪತ್ರಕರ್ತ ಹಸೈನಾರ್ ಜಯನಗರ ಕಾರ್ಯಕ್ರಮವನ್ನು ನಿರೂಪಿಸಿದರು.



