ಸುಳ್ಯ: ಪುತ್ತೂರಿನಿಂದ ಸುಳ್ಯ ಕಡೆಗೆ ಆಗಮಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ಸುಳ್ಯ ಸಮೀಪದ ಬೊಳುಬೈಲು ಬಳಿ ನಡೆದಿದೆ.
ಅಪಘಾತದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಗು ಸೇರಿದಂತೆ ನಾಲ್ಕು ಜನ ಪ್ರಯಾಣಿಕರು ಇದ್ದು ಮೂವರು ಗಾಯಗೊಂಡಿದ್ದಾರೆ. ಮಗು ಅಪಾಯದಿಂದ ಪಾರಗಿದೆ ಎಂದು ತಿಳಿದುಬಂದಿದೆ, ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಲೈಫ್ ಕೇರ್ ಹಾಗೂ ಎಸ್‌ಎಸ್‌ಎಫ್ ಆಂಬುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಕುರಿತು ಹೆಚ್ಚಿನ ವಿವರಗಳು ತಿಳಿದುಬರಬೇಕಿದ್ದು, ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

