Featured, ಇತರೆ, ಸ್ಥಳೀಯ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮನವಿಗೆ ಸ್ಪಂದಿಸಿದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ನಿರಂತರ ಕಾರ್ಮಿಕರ ಬಾಕಿ ವೇತನ (ಅರಿಯರ್ಸ್) ಪಾವತಿಗೆ ಅನುಮೋದನೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸುಳ್ಯ – ಐವರ್ನಾಡು – ಸುಬ್ರಹ್ಮಣ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಬೇಡಿಕೆಗಳನ್ನು ಇತ್ಯರ್ಥ ಪಡಿಸದೆ ಹಲವಾರು ವರ್ಷಗಳಿಂದ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಕಾರ್ಮಿಕ ಸಂಘಟನೆಗಳು ಧರಣಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಿರುವುದನ್ನು ಕೈ ಬಿಡುವಂತೆ ಸೂಚಿಸಿದ ರಾಧಾಕೃಷ್ಣ ಬೊಳ್ಳೂರು ರವರು ಕೆ ಎಫ್ ಡಿ ಸಿ ಕಾರ್ಯನಿರ್ವಾಹಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ ಕಾರ್ಮಿಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವಂತೆ ಮನವಿ ಮಾಡಿರುತ್ತಾರೆ. ಅದರಂತೆ ತಕ್ಷಣ ಸ್ಪಂದಿಸಿದ ಕೆ ಎಫ್ ಡಿ ಸಿ ನಿಗಮ ನಿರಂತರ ಕಾರ್ಮಿಕರಿಗೆ ಬಾಕಿ ವೇತನ (ಅರಿಯರ್ಸ್) ಪಾವತಿಸುವ ಬಗ್ಗೆ ಅನುಮೋದನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
m

Related Posts